ಪುತ್ತೂರು, ಕಡಬ: ಮತ್ತೆ 26 ಮಂದಿಯಲ್ಲಿ ಕೋವಿಡ್ ದೃಢ

Update: 2020-09-07 10:14 GMT

ಪುತ್ತೂರು, ಸೆ.7: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಸೋಮವಾರ ಮತ್ತೆ 26 ಕೊರೋನ ಪ್ರಕರಣಗಳು ದೃಢಪಟ್ಟಿವೆ.

ಪುತ್ತೂರು ನಗರಸಭಾ ವ್ಯಾಪ್ತಿಯ ಸಾಮೆತ್ತಡ್ಕ ನಿವಾಸಿ 42 ವರ್ಷದ ಪುರುಷ, ಬನ್ನೂರು ನಿವಾಸಿ 55 ವರ್ಷದ ಪುರುಷ, ಬೊಳುವಾರು ನಿವಾಸಿ 19 ವರ್ಷದ ಯುವಕ, ಗ್ರಾಮೀಣ ಪ್ರದೇಶದ ಅಂಕತಡ್ಕ ನಿವಾಸಿ 42 ವರ್ಷದ ಪುರುಷ, 10 ವರ್ಷದ ಬಾಲಕಿ, ಪಾಂಬಾರು ನಿವಾಸಿ 21 ವರ್ಷದ ಯುವಕ, ಬೆಳ್ಳಿಪ್ಪಾಡಿ ನಿವಾಸಿ 42 ವರ್ಷದ ಮಹಿಳೆ, 56 ವರ್ಷದ ಪುರುಷ, ಕೊಡಿಪ್ಪಾಡಿ ನಿವಾಸಿ 62 ವರ್ಷದ ಪುರುಷ, ನರಿಮೊಗರು ನಿವಾಸಿ 2 ವರ್ಷದ ಗಂಡು ಮಗು, 62 ವರ್ಷದ ಪುರುಷ, 48 ವರ್ಷದ ಮಹಿಳೆ, 70 ವರ್ಷದ ವೃದ್ಧ, 22 ವರ್ಷದ ಯುವತಿ, 24 ವರ್ಷದ ಯುವತಿ, 48 ವರ್ಷದ ಪುರುಷ, ಮುಂಡೂರು ನಿವಾಸಿ 29 ವರ್ಷದ ಪುರುಷ, ಕುಂಬ್ರ ನಿವಾಸಿ 36 ವರ್ಷದ ಪುರುಷ, ಹಿರೇಬಂಡಾಡಿ ನಿವಾಸಿ 29 ವರ್ಷದ ಪುರುಷ, 31 ವರ್ಷದ ಪುರುಷ, 26 ವರ್ಷದ ಯುವಕ, ಮುರ ನಿವಾಸಿ 39 ವರ್ಷದ ಪುರುಷರೊಬ್ಬರಲ್ಲಿ ಕೊರೋನ ದೃಢಪಟ್ಟಿದೆ.

ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ 65 ವರ್ಷದ ಪುರುಷ, ಆಲಂತಾಯ ನಿವಾಸಿ 54 ವರ್ಷದ ಪುರುಷ, ಮರ್ದಾಳ ನಿವಾಸಿ 84 ವರ್ಷದ ವೃದ್ಧೆ ಹಾಗೂ ಕಡಬ ನಿವಾಸಿ 80 ವರ್ಷದ ವೃದ್ಧರೊಬ್ಬರಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ.

ಇಂದಿನ ಸೋಂಕಿತರ ಸಂಖ್ಯೆ ಸೇರಿದಂತೆ ಈ ತನಕ ಉಭಯ ತಾಲೂಕುಗಳಲ್ಲಿ ದೃಢಪಟ್ಟ ಕೊರೋನ ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 957ಕ್ಕೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News