ಮದ್ಯದ ಅಮಲಿನಲ್ಲಿ ಪೊಲೀಸರ ಜೊತೆ ಗಲಾಟೆ ಮಾಡಿಕೊಂಡ ನಟ: ಆರೋಪ

Update: 2020-09-07 15:32 GMT

ಬೆಂಗಳೂರು, ಸೆ.7: ಸ್ಯಾಂಡಲ್‍ವುಡ್‍ನ ಡ್ರಗ್ ಪ್ರಕರಣದ ಬೆನ್ನಲ್ಲೇ ನಟರೊಬ್ಬರು ಮದ್ಯದ ಅಮಲಿನಲ್ಲಿ ನಗರದ ಪೊಲೀಸರ ಜೊತೆ ಗಲಾಟೆ ಮಾಡಿಕೊಂಡ ಆರೋಪ ಕೇಳಿಬಂದಿದೆ.

ರವಿವಾರ ರಾತ್ರಿ ಜಾಲಹಳ್ಳಿ ಮುಖ್ಯರಸ್ತೆಯ ಖಾಸಗಿ ಅಪಾರ್ಟ್ ಮೆಂಟ್ ಮುಂಭಾಗ ಗೆಳೆಯರೊಂದಿಗೆ ನಟ ಹರ್ಷ ಮದ್ಯ ಸೇವಿಸುತ್ತಾ ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಸುದ್ದಿ ತಿಳಿದು ಗಸ್ತಿನಲ್ಲಿದ್ದ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮದ್ಯಪಾನ ನಿಲ್ಲಿಸಿ ಮನೆಗೆ ಹೋಗುವಂತೆ ತಿಳಿ ಹೇಳಿದ್ದಾರೆ ಎನ್ನಲಾಗಿದೆ.

ಇದರಿಂದ ಕೋಪಗೊಂಡ ಹರ್ಷ ಮತ್ತು ಗೆಳೆಯರು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಬಳಿಕ ಪೊಲೀಸರು ಸ್ನೇಹಿತರ ಜೊತೆ ಹರ್ಷರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದು ಬುದ್ಧಿವಾದ ಹೇಳಿ, ಕಳುಹಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News