ಸೆ. 9: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-09-07 17:23 GMT

ಮಂಗಳೂರು, ಸೆ. 7: ನಗರದ ಉಪಕೇಂದ್ರಗಳ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ, ಜಿಒಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಸೆ.9ರಂದು ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.

ಸೆ.9ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 110/33/11 ಕೆ.ವಿ. ಕೊಣಾಜೆ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಕೊಣಾಜೆ, 11 ಕೆ.ವಿ. ಉಳ್ಳಾಲ ಎಕ್ಸ್‌ಪ್ರೆಸ್, 11 ಕೆ.ವಿ. ಮಂಜನಾಡಿ ಹಾಗೂ 11 ಕೆ.ವಿ. ಕಿನ್ಯಾ ಫೀಡರ್‌ಗಳಲ್ಲಿ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದರಿಂದ ನಗರದ ಹೊರವಲಯದ ಕೊಣಾಜೆ, ಅಸೈಗೋಳಿ, ಕಿನ್ಯಾ, ಮಂಜನಾಡಿ, ದೇರಳಕಟ್ಟೆ, ಪನೀರ್, ನಾಟೇಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ದೇರೆಬೈಲ್: ಸೆ.9ರಂದು ಬೆಳಗ್ಗೆ 10ರಿಂದ ಸಂಜೆ 3:30 ಗಂಟೆಯವರೆಗೆ 11 ಕೆ.ವಿ. ದೇರೆಬೈಲ್, ಮಾಲೆಮಾರ್, ಮುಲ್ಲಕಾಡು, ಮರಕಡ, ಕುಂಜತ್ತಬೈಲ್ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದೆ.

ಇದರಿಂದ ದೇರೆಬೈಲ್, ಕುಂಟಿಕಾನ, ಎ.ಜೆ. ಹಾಸ್ಪಿಟಲ್, ಪ್ರಶಾಂತನಗರ, ಮುಲ್ಲಕಾಡು, ಶಿವನಗರ, ಮಾಲೆಮಾರ್, ಲೋಹಿತ್‌ನಗರ, ಪ್ರಶಾಂತನಗರ, ಆಕಾಶಭವನ, ಉಲ್ಲಾಸ್‌ನಗರ, ಜ್ಯೋತಿನಗರ, ಮರಕಡ ಜಂಕ್ಷನ್, ಕುಂಜತ್ತಬೈಲ್ ಹಾಗೂ ಸುತ್ತಮುತ್ತಲಿನ. ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಸಂಬಂಧಪಟ್ಟ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News