ಉಡುಪಿ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್‌ನಲ್ಲಿ ಸಿದ್ದ ಉಡುಪುಗಳ ಮಾರಾಟ ಮೇಳ

Update: 2020-09-08 12:30 GMT

ಉಡುಪಿ, ಸೆ.8: ನಗರದ ಸಿಟಿ ಬಸ್ ನಿಲ್ದಾಣದ ಬಳಿಯ ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್‌ನಲ್ಲಿ ಬೃಹತ್ ರೆಡಿಮೇಡ್ ಗಾರ್ಮೆಂಟ್ಸ್‌ನ ಪ್ರದರ್ಶನ ಮತ್ತು ಮಾರಾಟ ಮೇಳವು ಆರಂಭಗೊಂಡಿದೆ. ಈ ಪ್ರದರ್ಶನ-ಮಾರಾಟ ಮಳಿಗೆಯು ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ.

ದೇಶವ್ಯಾಪಿ ಕೊರೋನ ಸೋಂಕು ರೋಗ-ಲಾಕ್‌ಡೌನ್‌ನಿಂದಾಗಿ ಬಟ್ಟೆ ವ್ಯಾಪಾರಿಗಳ ಫ್ಯಾಕ್ಟರಿಯಿಂದ ನೇರ ಖರೀದಿಗೆ ದುಷ್ಪರಿಣಾಮ ಬೀರಿದ್ದರಿಂದ ಬೃಹತ್ ಪ್ರಮಾಣದ ರೆಡಿಮೇಡ್ ಗಾರ್ಮೆಂಟ್ಸ್‌ಗಳು ಫ್ಯಾಕ್ಟರಿಯಲ್ಲೇ ಶೇಖರಿಸಲ್ಪಟ್ಟಿದೆ. ಎಲ್ಲಾ ಲೇಟೆಸ್ಟ್ ಫ್ಯಾಶನ್ ಬಟ್ಟೆಗಳು, ಲೇಡಿಸ್ ಜಂಟ್ಸ್ ಮತ್ತು ಮಕ್ಕಳ ಉಡುಪು ಗಳಾದ ಟೀ-ಶರ್ಟ್ಸ್, ಲೇಡಿಸ್ ಟಾಪ್, ಲೇಡಿಸ್ ಪ್ಯಾಂಟ್, ವೆಸ್ಟರ್ನ್ ಟಾಪ್, ಕುರ್ತಿ, ಲೇಡಿಸ್ ಪೈ ಜಾಮ್, ಪ್ಲಾಜೊ, ಲೋವರ್ ಇತ್ಯಾದಿಗಳು ವಸ್ತುಗಳನ್ನು ಕೇವಲ 200 ರೂ.ರಿಂದ 350 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇಲ್ಲಿ ವಿಶೇಷ ಕೌಂಟರ್‌ನ್ನು ತೆರೆಯಲಾಗಿದ್ದು ಮಲ್ಟಿ ಬ್ರಾಂಡ್ ಡಿಸೈನರ್ ಕುರ್ತಿ, ಪ್ರಿಂಟೆಡ್ ಕುರ್ತಿ, ಪಾರ್ಟಿವೇರ್ ಕುರ್ತಿ, ಜಂಟ್ಸ್ ಬ್ರಾಂಡೆಡ್ ಶರ್ಟ್ಸ್, ಟಿ-ಶರ್ಟ್ಸ್, ಜಂಟ್ಸ್ ಲೋವರ್, ಕಾಟನ್ ಟ್ರೌಸರ್ಸ್‌, ಜೀನ್ಸ್ ಇತ್ಯಾದಿ 450 ರೂ.ನಿಂದ 600 ರೂ.ರವರೆಗೆ ಮಾರಾಟಗೊಳ್ಳುತ್ತಿದೆ.

ಅಲ್ಲದೆ ನೇರವಾಗಿ ಸೀರೆಯನ್ನು ಮಿಲ್ ಮುಖಾಂತರ ರಿಟೇಲ್ ಗ್ರಾಹಕರಿಗೆ ಕಾಟನ್ ಪ್ರಿಂಟ್ ಸೀರೆ, ಜಾರ್ಜೆಟ್ ಪ್ರಿಂಟೆಡ್ ಸೀರೆ, ಶಿಾನ್ ಸೀರೆ, ಇಟೇಲಿಯನ್ ಕ್ರೇಪ್ ಸೀರೆ, ಪಾರ್ಟಿವೇರ್ ಸೀರ್, ಲೈಟ್‌ವೇಟ್ ಸೀರೆ ಹಾಗೂ ರಿಚ್‌ಪಲ್ಲು ಸೀರೆ ಕೇವಲ 150 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಲೇಡಿಸ್ ಸ್ಪೆಷಲ್ ಅಂಡರ್ ಗಾರ್ಮೆಂಟ್ಸ್ ಕೌಂಟರ್‌ನಲ್ಲಿ ದೇಶೀಯ ಮತ್ತು ಇಂಪೋರ್ಟೆಡ್ ಬ್ರಾ ಪ್ಯಾಂಟಿಗಳು ಕೇವಲ 50 ರೂ.ಗೆ ದೊರೆಯುತ್ತವೆ.

ಸರಕಾರದ ಆದೇಶದಂತೆ ಮಾಸ್ಕ್ ಮತ್ತು ಸುರಕ್ಷಿತ ಅಂತರ ಕಡ್ಡಾಯವಾಗಿ ಪಾಲಿಸಲಾಗುತ್ತಿದ್ದು ಗ್ರಾಹಕರಿಗೆ ಪ್ರಮುಖ ಡೆಬಿಟ್/ಕ್ರೆಡಿಟ್ ಕಾರ್ಡ್ಸ್, ಗೂಗಲ್ ಪೇ ಮತ್ತು ಫೋನ್ ಪೇ ಡಿಜಿಟಲ್ ಆ್ಯಪ್ ಗಳನ್ನು ಬಳಸಿ ಖರೀದಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News