ಬಂದಗದ್ದೆ ನಾಗರಾಜ್‌ಗೆ ಡಾಕ್ಟರೇಟ್

Update: 2020-09-09 15:42 GMT

ಮಂಗಳೂರು, ಸೆ.9: ವಿದ್ವಾಂಸ, ಕವಿ, ಸಾಹಿತಿ, ವಿದ್ವಾನ್ ಬಂದಗದ್ದೆ ನಾಗರಾಜ ಅವರು ಡಾಕ್ಟರೇಟ್ ಗೌರವಕ್ಕೆ ಭಾಜನರಾಗಿದ್ದಾರೆ.

ಯೋಗ ಯೂನಿವರ್ಸಿಟಿ ಆಫ್ ದಿ ಅಮೆರಿಕಾಸ್ ಫ್ಲೋರಿಡಾ ಇವರು ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ನಾಗರಾಜರನ್ನು ಗೌರವಿಸಿದರು.

ಮೂಲತಃ ಸಾಗರ ನಿವಾಸಿಯಾದ ನಾಗರಾಜ ಅವರು ಮಂಗಳೂರು ಗಣಪತಿ ಹೈಸ್ಕೂಲ್‌ನಲ್ಲಿ ಅಧ್ಯಾಪಕ ವೃತ್ತಿಯನ್ನು ನಡೆಸಿ ನಿವೃತ್ತರಾಗಿದ್ದಾರೆ. ವಿಶ್ರಾಂತ ಜೀವನದಲ್ಲಿ ಪೂರ್ಣಪ್ರಮಾಣದಲ್ಲಿ ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ವಿದ್ವಾನ್ ಬಂದಗದ್ದೆ ನಾಗರಾಜ ಅವರು ಕನ್ನಡದಲ್ಲಿ 6,500 ಭಾಮಿನೀ ಷಡ್ಪದಿಗಳುಳ್ಳ ಶ್ರೀಮದ್ವಿಷ್ಣು ಪುರಾಣಮ್, 7,400 ವಾರ್ಧಕ ಷಟ್ಪದಿಗಳುಳ್ಳ ಶ್ರೀಮದ್ ಗಣೇಶ ಪುರಾಣಮ್, 10,500 ಭಾಮಿನೀ ಷಟ್ಪದಿಗಳ ಕರ್ನಾಟಕ ಶ್ರೀಮದ್ ಭುವನೇಶ್ವರಿ ಕಥಾ ಮಂಜರಿ, ಶ್ರೀಮದಾದಿತ್ಯ ದರ್ಶನಮ್ ಛಂದೋಬದ್ಧ ಮಹಾಕಾವ್ಯಗಳನ್ನು ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News