ಬೆಂಗಳೂರು: 41 ಕೆಜಿ ಗಾಂಜಾ ಜಪ್ತಿ; ಹೊರರಾಜ್ಯದ ಇಬ್ಬರ ಬಂಧನ

Update: 2020-09-09 15:53 GMT

ಬೆಂಗಳೂರು, ಸೆ.9: ದೇವನಹಳ್ಳಿಯ ವಿಜಯಪುರ ಸಿಗ್ನಲ್ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, 20.50 ಲಕ್ಷದ ಮೌಲ್ಯದ 41 ಕೆಜಿ 200 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.

ತಮಿಳುನಾಡು ಮೂಲದ ಸೆಲ್ವಂ, ಆಂಧ್ರಪ್ರದೇಶದ ದೇವೇಂದ್ರ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಪಟ್ಟಣದ ವಿಜಯಪುರ ಸಿಗ್ನಲ್ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಆರೋಪಿಗಳನ್ನು ಬಂಧಿಸಿ ಅವರಿಂದ 20 ಲಕ್ಷದ 50 ಸಾವಿರ ಮೌಲ್ಯದ 41 ಕೆಜಿ 200 ಗ್ರಾಂ ಗಾಂಜಾ ಮತ್ತು ಎರಡು ಮೊಬೈಲ್ ಫೋನ್ ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News