ದ.ಕ. ಜಿಲ್ಲೆ : ಕೋವಿಡ್‌ಗೆ ಮತ್ತೆ ಒಂಬತ್ತು ಬಲಿ, 350 ಮಂದಿಗೆ ಕೊರೋನ ಸೋಂಕು

Update: 2020-09-10 14:59 GMT

ಮಂಗಳೂರು, ಸೆ.10: ದ.ಕ. ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಸಾವಿನ ಸರಣಿ ಮುಂದುವರಿದಿದ್ದು, ಗುರುವಾರ ಮತ್ತೆ ಒಂಬತ್ತು ಮಂದಿ ಮೃತಪಟ್ಟಿ ದ್ದಾರೆ. ಜೊತೆಗೆ, 350 ಮಂದಿಯಲ್ಲಿ ಕೊರೋನ ಪಾಸಿಟಿವ್ ವರದಿ ಬಂದಿದೆ.

ಮಂಗಳೂರು ತಾಲೂಕಿನ ಐವರು, ಬೆಳ್ತಂಗಡಿ ತಾಲೂಕಿನ ಇಬ್ಬರು, ಬಂಟ್ವಾಳ ತಾಲೂಕಿನ ಓರ್ವ, ಹೊರಜಿಲ್ಲೆಯ ಓರ್ವ ಮೃತಪಟ್ಟಿದ್ದಾರೆ. ಮೃತರೆಲ್ಲ ಕೊರೋನ ಸೋಂಕು ತಗುಲಿದ್ದಲ್ಲದೆ, ವಿವಿಧ ರೋಗಗಳಿಂದ ಬಳಲುತ್ತಿದ್ದರು. ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 427ಕ್ಕೆ ಏರಿಕೆಯಾಗಿದೆ.

350 ಮಂದಿಗೆ ಸೋಂಕು: ಗುರುವಾರ ಮತ್ತೆ 350 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಸೋಂಕಿತರ ಪೈಕಿ ಸಾಮಾಜ್ಯ ಶೀತ ಲಕ್ಷಣ- 119, ಸೋಂಕಿತರ ಸಂಪರ್ಕದಲ್ಲಿದ್ದ 100 ಮಂದಿ, ತೀವ್ರ ಉಸಿರಾಟ ತೊಂದರೆ- 27, ಸೋಂಕು ನಿಗೂಢ ಪ್ರಕರಣದಲ್ಲಿ 104 ಮಂದಿಗೆ ಸೋಂಕು ತಗುಲಿದೆ. 182 ಮಂದಿಯಲ್ಲಿ ಸೋಂಕಿನ ಗುಣಲಕ್ಷಣಗಳು ಕಂಡು ಬಂದಿದ್ದರೆ, 168 ಮಂದಿಯಲ್ಲಿ ಯಾವುದೇ ಲಕ್ಷಣಗಳು ಗೋಚರಿಸಿಲ್ಲ.

ಜಿಲ್ಲೆಯಲ್ಲಿನ ಸೋಂಕಿನ ಪ್ರಮಾಣವನ್ನು ಗಮನಿಸಿದರೆ ಮಂಗಳೂರು ತಾಲೂಕಿನಲ್ಲಿಯೇ ಅಧಿಕ ಸೋಂಕಿತರಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಗುರುವಾರ ಮಂಗಳೂರು ತಾಲೂಕಿನಲ್ಲಿ ಹೊಸದಾಗಿ 154 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಬಂಟ್ವಾಳ- 56, ಪುತ್ತೂರು-26, ಸುಳ್ಯ-13, ಬೆಳ್ತಂಗಡಿ-48, ಹೊರಜಿಲ್ಲೆಯ 53 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16,112ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ಮಂದಿ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 125 ಮಂದಿ ಸೇರಿದಂತೆ 170 ಮಂದಿ ಕೊರೋನಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 12,412 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 3,273 ಸಕ್ರಿಯ ಪ್ರಕರಣ ಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News