ನೇತ್ರಾಣಿ: ಸಮುದ್ರದಲ್ಲಿ 44 ಗಂಟೆಗಳ ಕಾಲ ಸಿಲುಕಿದ್ದ 24 ಮೀನುಗಾರರ ರಕ್ಷಣೆ

Update: 2020-09-11 10:09 GMT

ಭಟ್ಕಳ, ಸೆ.11: ನೇತ್ರಾಣಿ ಸಮೀಪದ ಅರಬ್ಬಿ ಸಮುದ್ರದಲ್ಲಿ ಯಾಂತ್ರಿಕ ದೋಣಿಯಲ್ಲಿ 44 ಗಂಟೆಗಳ ಕಾಲ ಸಿಲುಕಿಕೊಂಡಿದ್ದ 24 ಮೀನುಗಾರರನ್ನು ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

ಭಟ್ಕಳದ ಖಮ್ರುಲ್ಲಾ ಬಾಹರ್ ಹೆಸರಿನ ಯಾಂತ್ರಿಕ ದೋಣಿ ಹೊನ್ನಾವರ ಬಂದರು ಮೂಲಕ ಮೀನುಗಾರಿಕೆಗೆ ತೆರಳಿತ್ತು. ಗುರುವಾರ ಅಪರಾಹ್ನ 2 ಗಂಟೆಗೆ ದೋಣಿಯ ಇಂಜಿನ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ಬೋಟಿನಲ್ಲಿದ್ದ ಒಟ್ಟು 24 ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ಮೀನುಗಾರರು ರಕ್ಷಣೆಗಾಗಿ ಸಂಬಂಧಪಟ್ಟ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಪೊಲೀಸರ ಸಹಾಯ ಯಾಚಿಸಿದ್ದರು.

ನಿನ್ನೆ ಸಂಜೆ ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿ ನೌಕೆಯೊಂದಿಗೆ ಸ್ಥಳಕ್ಕೆ ತೆರಳಿದರಾದರೂ ಹವಾಮಾನ ವೈಪರೀತ್ಯದಿಂದಾಗಿ ರಕ್ಷಣೆ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ರೋಪ್ ಮೂಲಕ ಯಾಂತ್ರಿಕ ದೋಣಿಯ ಸಮೀಪ ಸಾಗಿ ಎಲ್ಲ ಮೀನುಗಾರರನ್ನು ರಕ್ಷಿಸಿ ಭಟ್ಕಳ ಕಡಲ ಕಿನಾರೆಗೆ ತಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News