ಬಿಬಿಎಂಪಿಯ ವಾರ್ಡ್ ವಾರು ಮೀಸಲಾತಿ ಪಟ್ಟಿ ಬಿಡುಗಡೆ: ಆಕ್ಷೇಪಣೆ ಅರ್ಜಿ ಸಲ್ಲಿಸಲು 7 ದಿನ ಕಾಲಾವಕಾಶ

Update: 2020-09-14 14:50 GMT

ಬೆಂಗಳೂರು, ಸೆ.14: ಬಿಬಿಎಂಪಿಯ 198 ವಾರ್ಡ್‍ಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರಕಾರ ಸೋಮವಾರ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.

ಈ ಕುರಿತಂತೆ ನಗರಾಭಿವೃದ್ಧಿ ಸಚಿವಾಲಯದಿಂದ ವಿಶೇಷ ರಾಜ್ಯ ಪತ್ರದಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, 2015ರಲ್ಲಿ ಹೊರಡಿಸಿರುವ ಮಾರ್ಗಸೂಚಿಯನ್ವಯ, 2011ರ ಜನಗಣತಿಯನ್ನಾಧರಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್ ಗಳಿಗೆ ಮೀಸಲಾತಿಯನ್ನು ನಿಗದಿಪಡಿಸಿ ಆದೇಶಿಸಿದೆ.

ಈ ಕರಡು ಅಧಿಸೂಚನೆಯಿಂದ ಬಾಧಿತರಾಗಬಹುದಾದ ವ್ಯಕ್ತಿಗಳು ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ಪ್ರಕಟಗೊಂಡ ಏಳು ದಿನಗಳಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು ಎಂದು ಕರಡು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ನಿಗದಿತ ಕಾಲಾವಧಿಯಲ್ಲಿ ಚುನಾವಣೆ ನಡೆಸಬೇಕೆಂದು ಬಿಬಿಎಂಪಿ ಮಾಜಿ ಸದಸ್ಯರಾದ ಶಿವರಾಜ್, ವಾಜೀದ್, ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆಯಬೇಕಿದೆ. ಈ ನಡುವೆಯೇ 198 ವಾರ್ಡ್ ಗಳಿಗೆ ಮೀಸಲಾತಿ ಪ್ರಕಟವಾಗಿದೆ.

ಹಲವು ವಾರ್ಡ್ ಗಳ ಬದಲಾವಣೆ, ಮೀಸಲಾತಿ ಬದಲಾವಣೆ, ಹಲವು ವಾರ್ಡ್ ಗಳಿಗೆ ಮಹಿಳೆಯರಿಗೆ ಮೀಸಲಾಗಿರುವುದು, ಕೆಲವು ವಾರ್ಡ್ ಗಳಲ್ಲಿ ಸಾಮಾನ್ಯ ಮೀಸಲು ಬದಲಾಗಿ ಹಿಂದುಳಿದ ವರ್ಗಕ್ಕೆ ಮೀಸಲಿರಿಸಲಾಗಿದೆ. ಹಾಗೆಯೇ ಹಾಲಿ ಇದ್ದ ವಾರ್ಡ್ ಗಳ ಸಂಖ್ಯೆ ಬದಲಾವಣೆ ಸೇರಿದಂತೆ ಅನೇಕ ಬದಲಾವಣೆಗಳನ್ನು ಮಾಡಿ ಸರಕಾರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.

ವಾರ್ಡ್‍ನ ಹೆಸರು, ಮೀಸಲಾತಿ:

1. ಕೆಂಪೇಗೌಡ- ಹಿಂದುಳಿದ ವರ್ಗ ಬಿ ಮಹಿಳೆ, 2.ಚೌಡೇಶ್ವರಿ- ಹಿಂದುಳಿದ ವರ್ಗ ಬಿ, 3. ಅಟ್ಟೂರು- ಹಿಂದುಳಿದ ವರ್ಗ ಎ, 4. ಯಲಹಂಕ ಉಪನಗರ- ಸಾಮಾನ್ಯ ಮಹಿಳೆ, 5.ಕೋಗಿಲು- ಹಿಂದುಳಿದ ವರ್ಗ ಎ ಮಹಿಳೆ, 6. ಥಣಿಸಂದ್ರ- ಸಾಮಾನ್ಯ ಮಹಿಳೆ. 7. ಜಕ್ಕೂರು- ಸಾಮಾನ್ಯ, 8. ಗುಂಡದ ಆಂಜನೇಯ ದೇವಸ್ಥಾನ- ಪರಿಶಿಷ್ಟ ಪಂಗಡ, 9. ಅಮೃತಹಳ್ಳಿ- ಸಾಮಾನ್ಯ, 10. ಕೊಡಿಗೇಹಳ್ಳಿ- ಹಿಂದುಳಿದ ವರ್ಗ ಎ,

11. ವಿದ್ಯಾರಣ್ಯಪುರ- ಸಾಮಾನ್ಯ, 12. ದೊಡ್ಡಬೊಮ್ಮಸಂದ್ರ- ಹಿಂದುಳಿದ ವರ್ಗ ಬಿ, 13. ರಾಮಚಂದ್ರಪುರ- ಹಿಂದುಳಿದ ವರ್ಗ ಎ ಮಹಿಳೆ, 14. ಶೆಟ್ಟಿಹಳ್ಳಿ-ಪರಿಶಿಷ್ಟ ಜಾತಿ. 15. ಚಿಕ್ಕಸಂದ್ರ- ಸಾಮಾನ್ಯ ಮಹಿಳೆ, 16. ಬಾಗಲಕುಂಟೆ- ಸಾಮಾನ್ಯ ಮಹಿಳೆ, 17. ಮಲ್ಲಸಂದ್ರ- ಸಾಮಾನ್ಯ, 18. ದಾಸರಹಳ್ಳಿ- ಪರಿಶಿಷ್ಟ ಜಾತಿ ಮಹಿಳೆ. 19. ಜಾಲಹಳ್ಳಿ- ಪರಿಶಿಷ್ಟ ಜಾತಿ, 20. ಬೃಂದಾವನನಗರ- ಸಾಮಾನ್ಯ ಮಹಿಳೆ

21. ಜೆ.ಪಿ. ಪಾರ್ಕ್- ಪರಿಶಿಷ್ಟ ಪಂಗಡ, 22. ಯಶವಂತಪುರ- ಪರಿಶಿಷ್ಟ ಜಾತಿ, 23. ಮತ್ತಿಕೆರೆ- ಹಿಂದುಳಿದ ವರ್ಗ ಎ, 24. ರಾಧಕೃಷ್ಣ ದೇವಸ್ಥಾನ- ಸಾಮಾನ್ಯ, 25. ಸಂಜಯನಗರ- ಸಾಮಾನ್ಯ ಮಹಿಳೆ, 26. ಹೆಬ್ಬಾಳ ಸಾಮಾನ್ಯ ಮಹಿಳೆ, 27. ವಿಶ್ವನಾಥನಾಗೇನಹಳ್ಳಿ- ಹಿಂದುಳಿದ ವರ್ಗ ಬಿ ಮಹಿಳೆ, 28. ಗೋವಿಂದಪುರ- ಹಿಂದುಳಿದ ವರ್ಗ ಬಿ ಮಹಿಳೆ, 29. ಹೆಣ್ಣೂರು- ಹಿಂದುಳಿದ ವರ್ಗ ಎ, 30. ಚೆಳ್ಳಕೆರೆ ಸಾಮಾನ್ಯ,

31. ಹೊರಮಾವು ಸಾಮಾನ್ಯ ಮಹಿಳೆ, 32. ಕಲ್ಕೆರೆ- ಹಿಂದುಳಿದ ವರ್ಗ ಎ ಮಹಿಳೆ. 33. ಬಾಣಸವಾಡಿ- ಸಾಮಾನ್ಯ, 34. ಕಮ್ಮನಹಳ್ಳಿ- ಸಾಮಾನ್ಯ 35. ಕಾಚರಕನಹಳ್ಳಿ- ಸಾಮಾನ್ಯ, 36. ಎಚ್‍ಬಿಆರ್ ಬಡಾವಣೆ- ಸಾಮಾನ್ಯ ಮಹಿಳೆ, 37. ಕಾಡುಗೊಂಡನಹಳ್ಳಿ- ಸಾಮಾನ್ಯ ಮಹಿಳೆ, 38. ಕುಶಾಲನಗರ- ಸಾಮಾನ್ಯ ಮಹಿಳೆ. 39. ಕಾವಲ್ ಬೈರಸಂದ್ರ-ಸಾಮಾನ್ಯ ಮಹಿಳೆ, 40. ಚಾಮುಂಡಿನಗರ- ಹಿಂದುಳಿದ ವರ್ಗ ಎ ಮಹಿಳೆ

41. ಗಂಗಾನಗರ- ಸಾಮಾನ್ಯ, 42. ಅರಮನೆನಗರ- ಸಾಮಾನ್ಯ ಮಹಿಳೆ, 43. ಚೊಕ್ಕಸಂದ್ರ- ಸಾಮಾನ್ಯ 44. ದೊಡ್ಡಬಿದರಕಲ್ಲು- ಹಿಂದುಳಿದ ವರ್ಗ ಎ ಮಹಿಳೆ, 45. ಪೀಣ್ಯ ಇಂಡಸ್ಟ್ರಿಯಲ್ ಏರಿಯಾ- ಸಾಮಾನ್ಯ, 46. ಲಕ್ಷ್ಮೀದೇವಿನಗರ- ಸಾಮಾನ್ಯ ಮಹಿಳೆ, 47. ನಂದಿನಿ ಬಡಾವಣೆ- ಹಿಂದುಳಿದ ವರ್ಗ ಎ ಮಹಿಳೆ, 48. ಮಾರಪ್ಪನ ಪಾಳ್ಯ- ಹಿಂದುಳಿದ ವರ್ಗ ಎ ಮಹಿಳೆ 49. ಮಲ್ಲೇಶ್ವರ- ಸಾಮಾನ್ಯ ಮಹಿಳೆ. 50. ಜಯಚಾಮರಾಜೇಂದ್ರನಗರ- ಸಾಮಾನ್ಯ, 

51. ದೇವರಜೀವನಹಳ್ಳಿ- ಸಾಮಾನ್ಯಮಹಿಳೆ, 52. ಮುನೇಶ್ವರ ನಗರ- ಪರಿಶಿಷ್ಟಪಂಗಡ ಮಹಿಳೆ, 53. ಲಿಂಗರಾಜಪುರ- ಪರಿಶಿಷ್ಟ ಜಾತಿ, 54. ಬೆನ್ನಿಗನಹಳ್ಳಿ- ಪರಿಶಿಷ್ಟ ಜಾತಿ, 55. ವಿಜಿನಾಪುರ- ಪರಿಶಿಷ್ಟ ಜಾತಿ, 56. ರಾಮಮೂರ್ತಿನಗರ- ಹಿಂದುಳಿದ ವರ್ಗ ಎ, 57. ಕೆ.ಆರ್.ಪುರ- ಸಾಮಾನ್ಯ, 58. ಬಸವನಪುರ- ಪರಿಶಿಷ್ಟ ಜಾತಿ, 59. ದೇವಸಂದ್ರ- ಸಾಮಾನ್ಯ 60. ಎ.ನಾರಾಯಣಪುರ- ಪರಿಶಿಷ್ಟ ಜಾತಿ,

61.ಸಿ.ವಿ.ರಾಮನ್ ನಗರ- ಹಿಂದುಳಿದ ವರ್ಗ ಬಿ. 62. ಸರ್ವಜ್ಞ ನಗರ- ಪರಿಶಿಷ್ಟ ಜಾತಿ ಮಹಿಳೆ, 63. ಮಾರುತಿಸೇವಾನಗರ- ಸಾಮಾನ್ಯ ಮಹಿಳೆ 64. ಸಗಾಯಪುರಂ- ಪರಿಶಿಷ್ಟ ಜಾತಿ ಮಹಿಳೆ, 65.ಪುಲಕೇಶಿನಗರ- ಸಾಮಾನ್ಯ ಮಹಿಳೆ 66.ರಾಮಸ್ವಾಮಿಪಾಳ್ಯ- ಸಾಮಾನ್ಯ ಮಹಿಳೆ 67. ರಾಜಮಹಲ್- ಗುಟ್ಟಳ್ಳಿ ಸಾಮಾನ್ಯ, 68.ಸುಬ್ರಹ್ಮಣ್ಯನಗರ ಸಾಮಾನ್ಯ, 69 ನಾಗಪುರ ಹಿಂದುಳಿದ ವರ್ಗ ಎ, 70. ಮಾರುತಿನಗರ- ಹಿಂದುಳಿದ ವರ್ಗ ಎ,

71. ಲಗ್ಗೆರೆ- ಸಾಮಾನ್ಯ 72. ರಾಜಗೋಪಾಲನಗರ- ಸಾಮಾನ್ಯ ಮಹಿಳೆ, 73. ಹೆಗ್ಗನಹಳ್ಳಿ- ಹಿಂದುಳಿದ ವರ್ಗ ಎ ಮಹಿಳೆ, 74. ಸುಂಕದಕಟ್ಟೆ- ಸಾಮಾನ್ಯ ಮಹಿಳೆ, 75. ಜಿ.ಹೊಸಹಳ್ಳಿ- ಸಾಮಾನ್ಯ, 76. ಹೇರೋಹಳ್ಳಿ- ಸಾಮಾನ್ಯ, 77.ಸರ್.ಎಂ ವಿಶ್ವೇಶ್ವರಯ್ಯ ಸಾಮಾನ್ಯ. 78. ಕೊಟ್ಟಿಗೆ ಪಾಳ್ಯ- ಸಾಮಾನ್ಯ, 79. ಶಕ್ತಿಗಣಪತಿ ನಗರ- ಸಾಮಾನ್ಯ ಮಹಿಳೆ, 80.ಶಂಕರಮಠ- ಹಿಂದುಳಿದ ವರ್ಗ ಬಿ,

81. ಮಂಜುನಾಥನಗರ- ಸಾಮಾನ್ಯ, 82. ಶ್ರೀರಾಮಮಂದಿರ- ಹಿಂದುಳಿದ ವರ್ಗ ಎ ಮಹಿಳೆ, 83. ದಯಾನಂದನಗರ- ಪರಿಶಿಷ್ಟ ಜಾತಿ, 84.ಗಾಯತ್ರಿ ನಗರ- ಹಿಂದುಳಿದ ವರ್ಗ ಎ ಮಹಿಳೆ, 85. ದತ್ತಾತ್ರೇಯ ದೇವಸ್ಥಾನ- ಸಾಮಾನ್ಯ ಮಹಿಳೆ, 86.ಶೇಷಾದ್ರಿಪುರಂ- ಸಾಮಾನ್ಯ ಮಹಿಳೆ, 87.ವಸಂತನಗರ- ಸಾಮಾನ್ಯ ಮಹಿಳೆ, 88. ಭಾರತಿನಗರ- ಹಿಂದುಳಿದ ವರ್ಗ ಎ ಮಹಿಳೆ, 89. ಹಲಸೂರು- ಪರಿಶಿಷ್ಠಜಾತಿ ಮಹಿಳೆ.

90.ಹೊಯ್ಸಳನಗರ- ಹಿಂದುಳಿದ ವರ್ಗ ಎ ಮಹಿಳೆ, 91. ಹೊಸ ತಿಪ್ಪಸಂದ್ರ- ಹಿಂದುಳಿದ ವರ್ಗ ಎ ಮಹಿಳೆ, 92. ವಿಜ್ಞಾನ ನಗರ- ಸಾಮಾನ್ಯ ಮಹಿಳೆ, 93. ಗರುಡಾಚಾರ್ ಪಾಳ್ಯ- ಸಾಮಾನ್ಯ ಮಹಿಳೆ, 94. ಹೂಡಿ- ಹಿಂದುಳಿದ ವರ್ಗ ಬಿ ಮಹಿಳೆ, 95. ಕಾಡುಗೋಡಿ- ಹಿಂದುಳಿದ ವರ್ಗ ಎ ಮಹಿಳೆ, 96. ಹಗದೂರು- ಪರಿಶಿಷ್ಟ ಜಾತಿ ಮಹಿಳೆ, 97.ವೈಟ್ ಫೀಲ್ಡ್- ಹಿಂದುಳಿದ ವರ್ಗ ಎ, 98. ದೊಡ್ಡನೆಕುಂದಿ- ಸಾಮಾನ್ಯ ಮಹಿಳೆ, 99. ಎಚ್.ಎ.ಎಲ್ ಏರ್ಪೋರ್ಟ್- ಸಾಮಾನ್ಯ ಮಹಿಳೆ,

100. ಕೋನೇನ ಅಗ್ರಹಾರ- ಸಾಮಾನ್ಯ ಮಹಿಳೆ, 101. ಜೀವನ ಭೀಮಾನಗರ- ಸಾಮಾನ್ಯ ಮಹಿಳೆ, 102. ಜೋಗುಪಾಳ್ಯ- ಸಾಮಾನ್ಯ ಮಹಿಳೆ, 103. ಶಾಂತಲನಗರ -ಹಿಂದುಳಿದ ವರ್ಗ ಎ ಮಹಿಳೆ, 104. ಸಂಪಂಗಿರಾಮನಗರ- ಸಾಮಾನ್ಯ ಮಹಿಳೆ, 105. ಗಾಂಧಿನಗರ- ಸಾಮಾನ್ಯ ಮಹಿಳೆ, 106. ಓಕುಳಿಪುರಂ- ಹಿಂದುಳಿದ ವರ್ಗ ಎ ಮಹಿಳೆ, 107. ರಾಜಾಜಿನಗರ- ಸಾಮಾನ್ಯ ಮಹಿಳೆ, 108. ಬಸವೇಶ್ವರ ನಗರ- ಸಾಮಾನ್ಯ ಮಹಿಳೆ, 109. ವೃಷಭಾವತಿ ನಗರ- ಸಾಮಾನ್ಯ ಮಹಿಳೆ, 110. ಕಾವೇರಿಪುರ- ಹಿಂದುಳಿದ ವರ್ಗ ಎ ಮಹಿಳೆ,

111. ಅಗ್ರಹಾರ ದಾಸರಹಳ್ಳಿ- ಹಿಂದುಳಿದ ವರ್ಗ ಎ ಮಹಿಳೆ, 112.ಡಾ. ರಾಜ್‍ಕುಮಾರ್ ವಾರ್ಡ್- ಸಾಮಾನ್ಯ ಮಹಿಳೆ, 113. ಚಿಕ್ಕಪೇಟೆ- ಸಾಮಾನ್ಯ ಮಹಿಳೆ, 114.ಛಲವಾದಿಪಾಳ್ಯ- ಪರಿಶಿಷ್ಠಜಾತಿ, 115. ಬಿನ್ನಿಪೇಟೆ- ಹಿಂದುಳಿದ ವರ್ಗ ಎ ಮಹಿಳೆ, 116, ಜಗಜೀವನರಾಮ ನಗರ- ಸಾಮಾನ್ಯ ಮಹಿಳೆ, 117. ಕೆಂಪಾಪುರ ಅಗ್ರಹಾರ- ಹಿಂದುಳಿದ ವರ್ಗ ಎ ಮಹಿಳೆ, 118.ವಿಜಯನಗರ- ಸಾಮಾನ್ಯ ಮಹಿಳೆ, 119.ಹೊಸಹಳ್ಳಿ- ಹಿಂದುಳಿದ ವರ್ಗ ಎ ಮಹಿಳೆ, 120.ಮಾರೇನಹಳ್ಳಿ- ಹಿಂದುಳಿದ ವರ್ಗ ಎ ಮಹಿಳೆ,

121. ಹನುಮಗಿರಿ ದೇವಸ್ಥಾನ- ಹಿಂದುಳಿದ ವರ್ಗ ಎ ಮಹಿಳೆ, 122.ಕಲ್ಯಾಣನಗರ- ಹಿಂದುಳಿದ ವರ್ಗ ಬಿ ಮಹಿಳೆ, 123.ಮಾರುತಿ ಮಂದಿರ ವಾರ್ಡ್- ಸಾಮಾನ್ಯ ಮಹಿಳೆ. 124. ಅತ್ತಿಗುಪ್ಪೆ- ಸಮಾನ್ಯ ಮಹಿಳೆ, 125. ಹಂಪಿನಗರ- ಹಿಂದುಳಿದ ವರ್ಗ ಎ ಮಹಿಳೆ, 126. ಬಾಪೂಜಿ ನಗರ ಪರಿಶಿಷ್ಟ ಜಾತಿ ಮಹಿಳೆ, 127 ಪಾದರಾಯನಪುರ- ಸಾಮಾನ್ಯ ಮಹಿಳೆ 128. ಕೃಷ್ಣರಾಜೇಂದ್ರ ಮಾರುಕಟ್ಟೆ- ಸಾಮಾನ್ಯ, 129. ಧರ್ಮರಾಯಸ್ವಾಮಿ ದೇವಸ್ಥಾನ- ಹಿಂದುಳಿದ ವರ್ಗ ಎ ಮಹಿಳೆ,

130. ಹೊಂಬೇಗೌಡನಗರ- ಸಾಮಾನ್ಯ ಮಹಿಳೆ, 131. ಶಾಂತಿನಗರ- ಸಾಮಾನ್ಯ ಮಹಿಳೆ. 132. ನೀಲಸಂದ್ರ- ಹಿಂದುಳಿದ ವರ್ಗ ಎ, 133. ವನ್ನಾರಪೇಟೆ ಪರಿಶಿಷ್ಟ ಜಾತಿ ಮಹಿಳೆ, 134.ಈಜಿಪುರ- ಸಾಮಾನ್ಯ, 135.ಕೋರಮಂಗಲ- ಪರಿಶಿಷ್ಟ ಜಾತಿ ಮಹಿಳೆ, 136. ಲಕ್ಕಸಂದ್ರ- ಪರಿಶಿಷ್ಟ ಜಾತಿ ಮಹಿಳೆ, 137- ಸಿದ್ದಾಪುರ ಸಾಮಾನ್ಯ ಮಹಿಳೆ, 138. ವಿಶ್ವೇಶ್ವರಪುರಂ ಸಾಮಾನ್ಯ ಮಹಿಳೆ, 139.ಸುಂಕೇನಹಳ್ಳಿ- ಸಾಮಾನ್ಯ, 140 ಅಜಾದ್ ನಗರ ಸಾಮಾನ್ಯ, 

141. ಗಾಳಿ ಆಂಜನೇಯ ದೇವಸ್ಥಾನ- ಪರಿಶಿಷ್ಟ ಜಾತಿ, 142. ದೀಪಾಂಜಲಿನಗರ- ಸಾಮಾನ್ಯ, 143.ನಾಯಂಡಹಳ್ಳಿ- ಸಾಮಾನ್ಯ, 144. ನಾಗರಬಾವಿ- ಸಾಮಾನ್ಯ, 145. ಜ್ಞಾನಭಾರತಿ- ಸಾಮಾನ್ಯ ಮಹಿಳೆ, 146. ಉಲ್ಲಾಳು- ಹಿಂದುಳಿದ ವರ್ಗ ಎ, 147. ನಾಗದೇವನಹಳ್ಳಿ- ಸಾಮಾನ್ಯ ಮಹಿಳೆ, 148. ಕೆಂಗೇರಿ- ಸಾಮಾನ್ಯ ಮಹಿಳೆ, 149. ರಾಜರಾಜೇಶ್ವರಿನಗರ- ಸಾಮಾನ್ಯ, 150.

ಹೊಸಕೆರೆಹಳ್ಳಿ- ಸಾಮಾನ್ಯ ಮಹಿಳೆ, 151. ಗಿರಿನಗರ ಸಾಮಾನ್ಯ, 152 ಶ್ರೀನಗರ- ಹಿಂದುಳಿದ ವರ್ಗ ಬಿ ಮಹಿಳೆ, 153.ಹನುಮಂತನಗರ& ಹಿಂದುಳಿದ ವರ್ಗ ಎ, 154. ಕತ್ರಿಗುಪ್ಪೆ- ಸಾಮಾನ್ಯ ಮಹಿಳೆ, 155- ವಿದ್ಯಾಪೀಠ ಹಿಂದುಳಿದ ವರ್ಗ ಎ, 156. ಬಸವನಗುಡಿ ಸಾಮಾನ್ಯ ಮಹಿಳೆ, 157. ಯಡಿಯೂರು- ಹಿಂದುಳಿದ ವರ್ಗ ಎ, 158. ಬೈರಸಂದ್ರ- ಸಾಮಾನ್ಯ ಮಹಿಳೆ, 159. ಜಯನಗರ ಪೂರ್ವ- ಹಿಂದುಳಿದ ವರ್ಗ ಎ ಮಹಿಳೆ,

160. ಗುರಪ್ಪನಪಾಳ್ಯ- ಸಾಮಾನ್ಯ, 161. ಸದ್ದುಗುಂಟೆ ಪಾಳ್ಯ- ಹಿಂದುಳಿದ ವರ್ಗ ಎ ಮಹಿಳೆ, 162. ಬಿಟಿಎಂ ಬಡಾವಣೆ- ಸಾಮಾನ್ಯ, 163. ಮಡಿವಾಳ- ಸಾಮಾನ್ಯ ಮಹಿಳೆ, 164. ಜಕ್ಕಸಂದ್ರ- ಹಿಂದುಳಿದ ವರ್ಗ ಎ, 165. ದೊಮ್ಮಲೂರು- ಹಿಂದುಳಿದ ವರ್ಗ ಎ, 166. ಮಾರತ್‍ಹಳ್ಳಿ- ಸಾಮಾನ್ಯ, 167. ವರ್ತೂರು- ಹಿಂದುಳಿದ ವರ್ಗ ಎ, 168. ದೊಡ್ಡಕನ್ನಹಳ್ಳಿ- ಪರಿಶಿಷ್ಟ ಜಾತಿ, 169. ಬೆಳ್ಳಂದೂರು- ಸಾಮಾನ್ಯ, 170. ಅಗರ- ಪರಿಶಿಷ್ಟ ಜಾತಿ ಮಹಿಳೆ.

171. ಎಚ್‍ಎಸ್‍ಆರ್ ಲೇಔಟ್- ಸಾಮಾನ್ಯ ಮಹಿಳೆ, 172. ಬೊಮ್ಮನಹಳ್ಳಿ- ಸಾಮಾನ್ಯ ಮಹಿಳೆ, 173. ಬಿಳೇಕಹಳ್ಳಿ- ಸಾಮಾನ್ಯ ಮಹಿಳೆ, 174. ಸಾರಕ್ಕಿ- ಸಾಮಾನ್ಯ ಮಹಿಳೆ, 175. ರಾಗಿಗುಡ್ಡ- ಹಿಂದುಳಿದ ವರ್ಗ ಎ, 176. ಕರಿಸಂದ್ರ- ಹಿಂದುಳಿದ ವರ್ಗ ಎ, 177. ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ- ಹಿಂದುಳಿದ ವರ್ಗ ಬಿ ಮಹಿಳೆ, 178. ಪದ್ಮನಾಭನಗರ- ಸಾಮಾನ್ಯ ಮಹಿಳೆ, 179. ಇಟ್ಟುಮಡು- ಸಾಮಾನ್ಯ, 180. ಉತ್ತರಹಳ್ಳಿ- ಪರಿಶಿಷ್ಟ ಪಂಗಡ ಮಹಿಳೆ,

181. ಸುಬ್ರಹ್ಮಣ್ಯಪುರ- ಹಿಂದುಳಿದ ವರ್ಗ ಎ ಮಹಿಳೆ, 182. ವಸಂತಪುರ- ಹಿಂದುಳಿದ ವರ್ಗ ಎ, 183. ಕುಮಾರಸ್ವಾಮಿ ಬಡಾವಣೆ- ಸಾಮಾನ್ಯ, 184. ಬನಶಂಕರಿ ದೇವಸ್ಥಾನ- ಹಿಂದುಳಿದ ವರ್ಗ ಎ ಮಹಿಳೆ, 185. ಯಲಚೇನಹಳ್ಳಿ- ಸಾಮಾನ್ಯ ಮಹಿಳೆ, 186. ಜರಗನಹಳ್ಳಿ- ಸಾಮಾನ್ಯ ಮಹಿಳೆ, 187. ಚುಂಚನಘಟ್ಟ- ಸಾಮಾನ್ಯ, 188.ಪುಟ್ಟೇನಹಳ್ಳಿ- ಹಿಂದುಳಿದ ವರ್ಗ ಎ, 189.ಹೊಂಗಸಂದ್ರ- ಹಿಂದುಳಿದ ವರ್ಗ ಬಿ ಮಹಿಳೆ, 190. ಸಿಂಗಸಂದ್ರ- ಹಿಂದುಳಿದ ವರ್ಗ ಎ ಮಹಿಳೆ, 

191. ಕೂಡ್ಲು- ಪರಿಶಿಷ್ಟ ಜಾತಿ ಮಹಿಳೆ, 192. ಬೇಗೂರು- ಹಿಂದುಳಿದ ವರ್ಗ ಎ ಮಹಿಳೆ, 193. ದೇವರಚಿಕ್ಕನಹಳ್ಳಿ- ಹಿಂದುಳಿದ ವರ್ಗ ಎ, 194. ಅರಕೆರೆ- ಸಾಮಾನ್ಯ, 195. ಕಾಳೇನ ಅಗ್ರಹಾರ- ಹಿಂದುಳಿದ ವರ್ಗ ಬಿ, 196. ಗೊಟ್ಟಿಗೆರೆ- ಸಾಮಾನ್ಯ ಮಹಿಳೆ, 197.ಅಂಜನಾಪುರ- ಸಾಮಾನ್ಯ ಮಹಿಳೆ, 198. ಹೆಮ್ಮಿಗೆಪುರ- ಸಾಮಾನ್ಯ ಮಹಿಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News