ಕೋಯನಗರದಲ್ಲಿ ಎಸ್ಸೆಸ್ಸೆಫ್ ಧ್ವಜ ದಿನಾಚರಣೆ
Update: 2020-09-19 15:20 GMT
ನಾವುಂದ, ಸೆ.19: ಎಸ್‌ಎಸ್‌ಎಫ್ ರಾಜ್ಯ ಸಮಿತಿಯ ನಿರ್ದೇಶನದಂತೆ ಎಸ್ಸೆಸ್ಸೆಫ್ ಕೋಯನಗರ ಶಾಖೆಯ ವತಿಯಿಂದ ಎಸ್ಸೆಸ್ಸೆಫ್ ಧ್ವಜ ದಿನಾಚರಣೆ ಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ನೂರುಲ್ ಹುದಾ ಮಸೀದಿ ಅಧ್ಯಕ್ಷ ಮುಹಮ್ಮದ್ ಇರ್ಷಾದ್ ಟಿ.ಎಂ.ಸಿ. ಧ್ವಜಾರೋಹಣ ನೆರವೇರಿಸಿದರು. ಎಸ್ಸೆಸ್ಸೆಫ್ ಶಾಖಾಧ್ಯಕ್ಷ ಮುಸ್ತಫ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ನಾಯಕರಾದ ಕೊಂಬಾಳಿ ಕೆ.ಎಂ.ಎಚ್. ಝುಹುರಿ ಸಂದೇಶ ಭಾಷಣ ಮಾಡಿದರು. ಮದ್ರಸ ಅಧ್ಯಾಪಕ ಮುನೀರ್ ಸಖಾಫಿ ಸುಳ್ಯ ದುವಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಮೊಹಲ್ಲಾ ಹಿರಿಯರಾದ ಇಖ್ಬಾಲ್ ದಾರಿಮಿ, ರಫೀಕ್ ಮುಲ್ಲಾ, ಅಬ್ಬಾಸ್, ಅಬ್ದುಲ್ ಖಾದರ್, ಶಾಹಿದ್, ಎಸ್‌ವೈಎಸ್ ಶಾಖಾ ಕಾರ್ಯದರ್ಶಿ ಇಮ್ತಿಯಾಝ್ ಕೆ.ಎಂ. ಮೊದಲಾದವರು ಉಪಸ್ಥಿತರಿದ್ದರು.