ಬಿಡಬ್ಲ್ಯೂಎಸ್‍ಎಸ್‍ಬಿ ಕಚೇರಿಯಲ್ಲಿ ಲಕ್ಷಾಂತರ ರೂ. ನಗದು ಕಳವು

Update: 2020-10-05 11:50 GMT

ಬೆಂಗಳೂರು, ಅ.5: ಇಲ್ಲಿನ ಬನಶಂಕರಿ ವಿಭಾಗದ  ಬಿಡಬ್ಲ್ಯೂಎಸ್‍ಎಸ್‍ಬಿ ಕಚೇರಿ ಬಳಿ ನೀರಿನ ಬಿಲ್ ಪಾವತಿಸಲು ಅಳವಡಿಸಿರುವ ಕಿಯೋಸ್ಕ್ ಯಂತ್ರ ಮುರಿದ ದುಷ್ಕರ್ಮಿಗಳು 2.94 ಲಕ್ಷ ರೂ. ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಾರ್ವಜನಿಕರು ನೀರಿನ ಬಿಲ್ ಪಾವತಿಸಲು ಬನಶಂಕರಿ 3ನೇ ಹಂತದ ಬನಗಿರಿ ನಗರದಲ್ಲಿರುವ ಬಿಡಬ್ಲ್ಯೂಎಸ್‍ಎಸ್‍ಬಿ ಕಚೇರಿ ಬಳಿ ಕಿಯೋಸ್ಕ್ ಯಂತ್ರ ಅಳವಡಿಸಲಾಗಿದೆ. ಜನರು ಯಂತ್ರದಲ್ಲಿ ಪಾವತಿಸಿದ ನೀರಿನ ಬಿಲ್‍ನ್ನು ಸಿಬ್ಬಂದಿ ಲಕ್ಷ್ಮೀ ಎಂಬುವರು ಬ್ಯಾಂಕಿಗೆ ಸಂದಾಯ ಮಾಡುತ್ತಾರೆ. ರಜಾ ದಿನಗಳಲ್ಲಿಯೇ ಹೆಚ್ಚಿನ ಸಂಖ್ಯೆಯ ಜನರು ಬಿಲ್ ಪಾವತಿಸುತ್ತಾರೆ. ಹೀಗಾಗಿ ಯಂತ್ರದಲ್ಲಿ ಬೇಗ ಹಣ ತುಂಬುತ್ತದೆ.

ಸೆ.26 ನಾಲ್ಕನೇ ಶನಿವಾರ ಹಾಗೂ 27ರಂದು ರವಿವಾರದ ರಜೆ ಇದ್ದು, ಶನಿವಾರದಂದು ಜನರು ಪಾವತಿಸಿದ ಹಣವನ್ನು ಯಂತ್ರದ ಪಕ್ಕದಲ್ಲಿನ ಡಬ್ಬಿಯಲ್ಲಿ ಇಡಲಾಗಿತ್ತು. ಆದರೆ, ದುಷ್ಕರ್ಮಿಗಳು ಕಿಯೋಸ್ಕ್ ಯಂತ್ರವನ್ನು ಜಖಂಗೊಳಿಸಿ ಹಣ ಎಗರಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಬಿಡಬ್ಲ್ಯೂಎಸ್‍ಎಸ್‍ಬಿ ಕಚೇರಿಯ ಕಾರ್ಯನಿರ್ವಾಹಕ ಅಧಿಕಾರಿ ನಹೀಂವುಲ್ಲಾಶೀರ್ ಎಂಬುವರು ಸಲ್ಲಿಸಿರುವ ದೂರಿನನ್ವಯ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News