ಮಾದಕ ವಸ್ತುಗಳ ಮಾರಾಟ ಆರೋಪ: ರೌಡಿ ಶೀಟರ್ ಬಂಧನ

Update: 2020-10-06 11:56 GMT

ಬೆಂಗಳೂರು, ಅ.6: ಮಾದಕ ವಸ್ತು ಮಾರಾಟ ಆರೋಪ ಪ್ರಕರಣ ಸಂಬಂಧ ರೌಡಿಯೋರ್ವನನ್ನು ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸೈಯದ್ ನಾಝೀಂ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಮಾರಾಟ, ಸಂಗ್ರಹ, ಸಾಗಾಣಿಕೆ ಜಾಲದಲ್ಲಿ 2009ನೇ ಸಾಲಿನಲ್ಲಿ ಭಾಗಿಯಾಗಿ 6 ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರಬಂದ ನಂತರ ಮತ್ತೆ ಗಾಂಜಾ ಮಾರಾಟದಲ್ಲಿ ಭಾಗಿಯಾಗಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅನುಮತಿ ಪಡೆದು ಈ ಕಾಯ್ದೆಯಡಿ ರೌಡಿಯನ್ನು ಬಂಧಿಸಲಾಗಿತ್ತು. ಇದೇ ಕಾಯ್ದೆಯಡಿ ನೈಜೀರಿಯಾ ಪ್ರಜೆಯೋರ್ವನನ್ನು ಬಂಧಿಸಲಾಗಿತ್ತು ಎಂದು ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News