ರಾಜ್ಯದಲ್ಲಿ ಒಂದೇ ದಿನ ಲಕ್ಷ ಕೋವಿಡ್‌ ಪರೀಕ್ಷೆ: ಸಚಿವ ಡಾ. ಸುಧಾಕರ್‌

Update: 2020-10-07 07:46 GMT

ಬೆಂಗಳೂರು, ಅ.7: ರಾಜ್ಯದಲ್ಲಿ ಮಂಗಳವಾರ ಒಂದೇ ದಿನ ಲಕ್ಷ ಮಂದಿಗೆ ಕೋವಿಡ್‌-19 ಪರೀಕ್ಷೆ ನಡೆಸಲಾಗಿದ್ದು, ಶೀಘ್ರವೇ ಈ ಪ್ರಮಾಣವನ್ನು 1.5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ‌ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸಚಿವರು, ಮಂಗಳವಾರ ಒಂದೇ ದಿನ 1,04,348 ಕೋವಿಡ್‌ ಟೆಸ್ಟ್‌ ನಡೆಸುವ ಮೂಲಕ ಈ ಹಿಂದೆ ಹೇಳಿದಂತೆ ನಿಗದಿತ ಗುರಿ ತಲುಪಿದ್ದೇವೆ.

ರಾಜ್ಯಾದ್ಯಂತ ಇರುವ 146 ಲ್ಯಾಬ್‌ಗಳ ಮೂಲಕ 55,690 ಆರ್‌ಟಿಪಿಸಿಆರ್ ಹಾಗೂ 48,658 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‌ ನಡೆಸಲಾಗಿದೆ. ಶೀಘ್ರವೇ ಈ ಪ್ರಮಾಣವನ್ನು 1.5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News