ಶಿರ್ವ: ವ್ಯಕ್ತಿತ್ವ ವಿಕಸನ, ಸಂವಹನ ತರಬೇತಿ ಕಾರ್ಯಾಗಾರ

Update: 2020-10-23 16:11 GMT

ಶಿರ್ವ, ಅ.23: ಪಟ್ಟಣದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದ ಮಕ್ಕಳು ಭಾವನಾತ್ಮಕವಾಗಿ ಮತ್ತು ಪರಿಸರಕ್ಕೆ ಹತ್ತಿರವಾಗಿ ಬೆಳೆಯುತ್ತಾರೆ. ಇಂತಹ ಯುವಕರಿಗೆ ಸರಿಯಾದ ಮಾರ್ಗದರ್ಶನ ದೊರೆತರೆ ಅವರ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ ಎಂದು ಉಡುಪಿಯ ಉದ್ಯಮಿ ಸುನಿಲ್ ಸಾಲಿಯಾನ್ ಹೇಳಿದ್ದಾರೆ.

ಶಿರ್ವದ ಮುಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ ಶುಕ್ರವಾರ ನಡೆದ ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕಲೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡುತಿದ್ದರು.

ಮತ್ತೊಬ್ಬ ಮುಖ್ಯ ಅತಿಥಿ ಪ್ರೇಮ್‌ಪ್ರಸಾದ್ ಶೆಟ್ಟಿ ಉಡುಪಿ ಮಾತನಾಡಿ, ವ್ಯಕ್ತಿತ್ವ ವಿಕಸನದ ಮೂಲ ಉದ್ದೇಶವೇ ನಮ್ಮ ಆತ್ಮಶಕ್ತಿಯನ್ನು ಶಕ್ತಿಯುತವಾಗಿ ರೂಪಿಸಿಕೊಳ್ಳುವುದೇ ಆಗಿದೆ. ಆತ್ಮಬಲವಿದ್ದವನು ಸೋಲುಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಹೊಂದಿರುತ್ತಾರೆ ಎಂದರು.

ಸೃಷ್ಟಿ ಮತ್ತು ವರ್ಷಿಣಿ ತರಬೇತಿ ಪಡೆದ ವಿದ್ಯಾರ್ಥಿಗಳ ಪರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರಾದ ಡಾ. ನಯನ ವಹಿಸಿದ್ದರು.ಅಧ್ಯಾಪಕ ಸಲಹೆಗಾರರಾದ ಪ್ರೊ.ಹೇಮಲತಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿ ಗಳನ್ನು ಸ್ವಾಗತಿಸಿದರು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲ ಪ್ರೊ.ಕೆ.ಜಿ.ಮಂಜುನಾಥ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News