ಕುಕ್ಕೆಹಳ್ಳಿ ಯುವತಿಯ ಸಂಶಯಾಸ್ಪದ ಸಾವು: ಪ್ರಿಯಕರನ ವಿಚಾರಣೆ

Update: 2020-10-26 15:56 GMT

ಉಡುಪಿ, ಅ.26: ಕುಕ್ಕೆಹಳ್ಳಿಯ ಪ್ರಭಾಕರ ನಾಯಕ್ ಎಂಬವರ ಮಗಳು ರಕ್ಷಿತಾ ನಾಯಕ್(19) ಅ.24ರಂದು ಅಂಬಾಗಿಲಿನಲ್ಲಿರುವ ಬಾಡಿಗೆ ರೂಮಿ ನಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಪ್ರಿಯಕರನನ್ನು ಉಡುಪಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ರಕ್ಷಿತಾ ಮಂಗಳೂರಿನ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ಅ.22ರಂದು ಉಡುಪಿಗೆ ಬಂದಿದ್ದ ಆಕೆ ಮಂಗಳೂರಿಗೆ ತೆರಳಿದ್ದಳು. ಅ.24 ರಂದು ಪ್ರಶಾಂತ್ ಎಂಬಾತ ಕರೆ ಮಾಡಿ, ರಕ್ಷಿತಾಳನ್ನು ಉಡುಪಿ ಖಾಸಗಿ ಅಸ್ಪತ್ರೆಗೆ ಸೇರಿಸಿರುವು ದಾಗಿ ತಿಳಿಸಿದ್ದನು. ಆದರೆ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಆಕೆ ಮೃತಪಟಿದ್ದು, ಆಕೆಯ ಸಾವಿನ ಬಗ್ಗೆ ಸಂಶಯ ಇದೆ ಎಂದು ಪ್ರಾಕರ ನಾಯಕ್ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಶಾಂತ್‌ನ ವಿಚಾರಣೆ: ದೂರಿನಂತೆ ಆಕೆಯ ಪ್ರಿಯಕರ ಜಡ್ಕಲ್ ಮೂಲದ, ಸದ್ಯ ಉಪ್ಪೂರಿನಲ್ಲಿ ಪತ್ನಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿ ರುವ ಪ್ರಶಾಂತ್ ಕುಂದರ್(24) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಇವರಿಬ್ಬರಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ, ಪರಸ್ಪರ ಪ್ರೀತಿಸುತ್ತಿದ್ದರು. ಆರಂಭದಲ್ಲಿ ಪ್ರಶಾಂತ್ ವಿವಾಹ ವಾಗಿರುವುದನ್ನು ತಿಳಿಯದ ಆಕೆ, ನಂತರ ತಿಳಿದ ಬಳಿಕ ಪತ್ನಿಯನ್ನು ತೊರೆದು ತನ್ನ ಜೊತೆ ಬರುವಂತೆ ಪೀಡಿಸುತ್ತಿದ್ದಳು. ಆದರೆ ಇದನ್ನು ಪ್ರಶಾಂತ್ ನಿರಾಕರಿಸಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ.

ಇದೇ ವಿಚಾರದಲ್ಲಿ ಅ.24ರಂದು ಕರೆ ಮಾಡಿದ ಆಕೆ, ಆತ್ಮಹತ್ಯೆ ಬೆದರಿಕೆ ಹಾಕಿದ್ದಳೆನ್ನಲಾಗಿದೆ. ಇದರಿಂದ ಗಾಬರಿಗೊಂಡ ಪ್ರಶಾಂತ್, ಆಕೆಯ ರೂಮಿಗೆ ತೆರಳಿ, ಹಿಂದಿನ ಬಾಗಿಲು ಮುರಿದು ಒಳನುಗ್ಗಿ, ನೇಣು ಬಿಗಿದ ಸ್ಥಿತಿಯಲ್ಲಿದ್ದ ಆಕೆಯನ್ನು ತಕ್ಷಣ ರಿಕ್ಷಾದಲ್ಲಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದನು. ಆದರೆ ಅಲ್ಲಿ ಆಕೆ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ಪ್ರಶಾಂತ್, ಅಲ್ಲಿಂದ ಪರಾರಿಯಾಗಿದ್ದನು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ವ್ಯವಹಾರದಲ್ಲಿ ಸಹಾಯ: ಪ್ರಶಾಂತ್ ಇಂಟೀರಿಯರ್ ಡಿಸೈನ್ ಕೆಲಸ ಮಾಡುತ್ತಿದ್ದರೆ, ರಕ್ಷಿತಾ ಮಣಿಪಾಲದ ಖಾಸಗಿ ಸಂಸ್ಥೆಯಲ್ಲಿ ಕೋರ್ಸ್ ಮಾಡು ತ್ತಿದ್ದಳು. ಲಾಕ್‌ಡೌನ್ ಸಂದರ್ಭದಲ್ಲಿ ಹೊಟೇಲಿನಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವರಿಗೆ ಹೇಳಿದ್ದ ರಕ್ಷಿತಾ, ಉಡುಪಿಯ ಅಂಬಾಗಿಲಿ ನಲ್ಲಿ ರೂಮ್ ಮಾಡಿಕೊಂಡಿದ್ದಳು.

ಹೀಗೆ ಕಳೆದ ಮೂರು ನಾಲ್ಕು ತಿಂಗಳಿನಿಂದ ಬಾಡಿಗೆ ರೂಮಿನಲ್ಲಿ ವಾಸ ಮಾಡಿಕೊಂಡಿದ್ದ ಆಕೆ, ವ್ಯವಹಾರದಲ್ಲಿ ಪ್ರಶಾಂತ್‌ಗೆ ತುಂಬಾ ಸಹಾಯ ಮಾಡುತ್ತಿದ್ದಳು ಎಂದು ಪ್ರಶಾಂತ್ ವಿಚಾರಣೆ ವೇಳೆ ತಿಳಿಸಿದ್ದ ಎನ್ನಲಾಗಿದೆ.

ಪ್ರಿಯಕರ ಪೊಕ್ಸೋ ಪ್ರಕರಣದ ಆರೋಪಿ !

ಮೃತರ ಮನೆಯವರು ರಕ್ಷಿತಾಳ ಸಾವಿನಲ್ಲಿ ಸಂಶಯ ಇದೆ ಎಂಬುದಾಗಿ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೃತದೇಹದ ಮೈಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ಪ್ರಶಾಂತ್‌ನನ್ನು ವಿಚಾರಣೆ ನಡೆಸಿ ಕಳುಹಿಸಲಾಗಿದೆ. ಇನ್ನು ಸಾವಿಗೆ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿದುಬರಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

2016ರಲ್ಲಿ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪೊಕ್ಸೋ ಪ್ರಕರಣದಡಿ ಪ್ರಶಾಂತ್ ಕುಂದರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಈತನಿಗೆ ಐದು ತಿಂಗಳ ಕಾಲ ಜೈಲು ಶಿಕ್ಷೆ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News