ದ.ಕ. ಜಿಲ್ಲೆ : 99 ಮಂದಿಗೆ ಕೊರೋನ ಸೋಂಕು

Update: 2020-10-28 14:56 GMT

ಮಂಗಳೂರು, ಅ.28: ಕೆಲ ದಿನಗಳಿಂದ ಕೊರೋನ ಇಳಿಮುಖವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸೋಂಕಿತರ ಸಂಖ್ಯೆ ನೂರಕ್ಕಿಂತ ಕೆಳಗೆ ಇಳಿದಿದೆ. 99 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಮೂವರು ಸಾವಿಗೀಡಾಗಿದ್ದಾರೆ. 161 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 30 ಸಾವಿರ ಸಮೀಪಿಸಿದೆ (ಒಟ್ಟು 29,914). ಇವರಲ್ಲಿ ಇದುವರೆಗೆ 27,019 ಮಂದಿ ಗುಣಮುಖರಾಗಿದ್ದರೆ, 671 ಮಂದಿ ಮೃತಪಟ್ಟಿದ್ದಾರೆ. ಗುಣಮುಖರ ಸಂಖ್ಯೆ ಏರುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಹಾದಿಯಲ್ಲಿದೆ. ಪ್ರಸ್ತುತ 2,224 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2,51,859 ಮಂದಿಯನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದುವರೆಗೆ ಒಟ್ಟು 10,010 ಮಾಸ್ಕ್ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ, 11,22,535 ರು. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News