ಬಂಟ್ವಾಳದ ಮೂವರು ಸಾಧಕರಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Update: 2020-10-30 15:15 GMT

ಬಂಟ್ವಾಳ, ಅ.30: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬಂಟ್ವಾಳ ತಾಲೂಕಿನ ಮೂವರು ಸಾಧಕರಿಗೆ ಹಾಗೂ ಉತ್ತಮ ಕಾರ್ಯಚಟುವಟಿಕೆಗಳ ಮೂಲಕ ಹೆಸರು ಪಡೆದ ಸಂಸ್ಥೆಯೊಂದಕ್ಕೆ ಈ ಬಾರಿಯ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. 

ರಂಗಕಲಾವಿದ, ತುಳು ಚಲನಚಿತ್ರ ನಟ ಚೇತನ್ ರೈ ಮಾಣಿ, ನೇತ್ರಾವತಿ ವೀರ ಎಂದೇ ಖ್ಯಾತಿ ಪಡೆದ ರಿಕ್ಷಾ ಚಾಲಕ ಅಬ್ದುಲ್ ಸತ್ತಾರ್ ಗೂಡಿನಬಳಿ, ಸಮಾಜ ಸೇವಕ ಸುಬ್ರಹ್ಮಣ್ಯ ಭಟ್ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದರೆ, ನೆತ್ತರಕೆರೆ ನವೋದಯ ಮಿತ್ರಕಲಾ ಯುವಕ ಸಂಘ ಕೂಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News