ಅಪರಿಚಿತ ಮೃತ್ಯು

Update: 2020-10-30 16:28 GMT

ಗಂಗೊಳ್ಳಿ, ಅ.30: ಸೇನಾಪುರ ಗ್ರಾಮದ ಸೌಪರ್ಣಿಕ ಹೊಳೆಯಲ್ಲಿ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಅ.29ರಂದು ಮಧ್ಯಾಹ್ನ 3:30ರ ಸುಮಾರಿಗೆ ಪತ್ತೆಯಾಗಿದೆ.

ಮೃತರು ಉರುಟು ಮುಖ, ಗಡ್ಡ, ಮೀಸೆ, ತಲೆಕೂದಲು ಬಿಟ್ಟಿದ್ದು ಬಿಳಿ ಮೈ ಬಣ್ಣ ಹೊಂದಿದ್ದಾರೆ. ಕಪ್ಪುಬಣ್ಣದ ಚುಕ್ಕೆಗಳಿರುವ ಅರ್ಧತೋಳಿನ ಅಂಗಿ, ಕಪ್ಪುನೀಲಿ ಬಣ್ಣ ಮಿಶ್ರಿತ ಗೆರೆಗಳಿರುವ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಬನಿಯಾನ್ ಧರಿಸಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News