ಕಾಸರಗೋಡು ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆ ಉದ್ಘಾಟನೆ

Update: 2020-11-01 08:20 GMT

ಕಾಸರಗೋಡು , ನ.1: ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವಿವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಸೈಬರ್ ಅಪರಾಧಗಳಿಗೆ ಶಿಕ್ಷೆ ಖಾತರಿಪಡಿಸಲು ಪೊಲೀಸ್ ಕಾಯ್ದೆಯಲ್ಲಿ ಬದಲಾವಣೆ ತರಲಾಗುವುದು ಎಂದರು.

ಸಾಮಾಜಿಕ ಜಾಲತಾಣಗಳ ಮೂಲಕ  ಮಕ್ಕಳು, ಮಹಿಳೆಯರ ಮೇಲೆ ಅವಹೇಳನಗಳು  ಹೆಚ್ಚುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸಾಮಾಜಿಕ ಜಾಲತಾಣಗಳ ದುರುಪಯೋಗವನ್ನು ತಡೆಗಟ್ಟುವುದು ಅನಿವಾರ್ಯ ಎಂದು ಹೇಳಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ  ಲೋಕನಾಥ ಬೆಹ್ರಾ, ಎಡಿಜಿಪಿ ಮನೋಜ್ ಅಬ್ರಹಾಂ, ಡಾ.ಶೇಕ್ ದರ್ವೇಶ್ ಸಾಹೇಬ್, ಪಿ.ವಿಜಯನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಎಎಸ್ಪಿ ಕ್ಷೇವಿಯರ್ ಸೆಬಾಸ್ಟಿಯನ್, ಸ್ಪೆಷಲ್ ಬ್ರಾಂಚ್ ಡಿವೈಎಸ್ಪಿ ಹರೀಶ್ಚ೦ದ್ರ ನಾಯ್ಕ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News