ಉಡುಪಿ ಶ್ರೀಕೃಷ್ಣ ದರ್ಶನದ ಅವಧಿ ವಿಸ್ತರಣೆ

Update: 2020-11-01 14:08 GMT

ಉಡುಪಿ, ನ.1: ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತಾದಿಗಳಿಗೆ ಹೆಚ್ಚು ಅನು ಕೂಲವಾಗುವಂತೆ ನ.4ರಿಂದ ದೇವರ ದರ್ಶನದ ಅವಧಿಯನ್ನು ವಿಸ್ತರಿಸ ಲಾಗಿದೆ.

ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಸೆ.28ರಿಂದ ಮಧ್ಯಾಹ್ನ 2ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶ್ರೀಕೃಷ್ಣನ ದರ್ಶನದ ವ್ಯವಸ್ಥೆಯನ್ನು ಭಕ್ತರಿಗೆ ಕಲ್ಪಿಸಿದ್ದರು. ಈಗ ಸ್ಥಳೀಯ ಹಾಗೂ ಪರವೂರ ಭಕ್ತರ ಅನುಕೂಲಕ್ಕಾಗಿ ದೇವರ ದರ್ಶನದ ಸಮಯದಲ್ಲಿ ಇನ್ನೂ ಬದಲಾವಣೆ ಮಾಡಲಾಗಿದೆ.

ಅದರಂತೆ ನ.4ರಿಂದ ಬೆಳಿಗ್ಗೆ 8.30ರಿಂದ ಬೆಳಿಗ್ಗೆ 10ರವರೆಗೆ ಹಾಗೂ ಈ ಹಿಂದಿನಂತೆ ಮಧ್ಯಾಹ್ನದ ಸಮಯವನ್ನು 2ಗಂಟೆಯಿಂದ ಸಂಜೆ 5ರ ಬದಲು 6ಗಂಟೆಯವರೆಗೆ ವಿಸ್ತರಿಸಿ, ಭಕ್ತಾಧಿಗಳಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News