ಪುಣಚ: ಜಲ್ಲಿ ಸಾಗಾಟದ ಟಿಪ್ಪರ್ ಪಲ್ಟಿ; ಚಾಲಕ ಸ್ಥಳದಲ್ಲೇ ಮೃತ್ಯು

Update: 2020-11-04 10:11 GMT

ಬಂಟ್ವಾಳ, ನ.4: ಜಲ್ಲಿ ಸಾಗಾಟದ ಲಾರಿಯೊಂದು ಉರುಳಿಬಿದ್ದ ಪರಿಣಾಮ ಅದರ ಚಾಲಕ ಸ್ಥಳದಲ್ಲಿಯೇ ಮೃತಪಟ್ಟು ಕ್ಲೀನರ್ ಗಾಯಗೊಂಡಿರುವ ಘಟನೆ ತಾಲೂಕಿನ ಪುಣಚ ಬುಳೇರಿಕಟ್ಟೆ ರಸ್ತೆಯಲ್ಲಿ ಬುಧವಾರ ಸಂಭವಿಸಿದೆ.

ಪುಣಚ ಸಮೀಪದ ಕೋರೆಯೊಂದರಿಂದ ಜಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಪುಣಚ ಗ್ರಾಮದ ಪಾಲತ್ತಡ್ಕ ಎಂಬಲ್ಲಿ ನಿಯಂತ್ರಣ ಕಳೆದ ಲಾರಿ ರಸ್ತೆಯಲ್ಲಿ ಪಲ್ಟಿಯಾಗಿದೆ. ಚಾಲಕ ಲಾರಿ ಅಡಿಯಲ್ಲಿ ಹಲವು ಸಮಯದವರೆಗೆ  ಸಿಕ್ಕಿಹಾಕಿ ಮೃತಪಟ್ಟಿದ್ದಾರೆ.

ಸ್ಥಳೀಯರ ಸಹಕಾರದಲ್ಲಿ ಮೃತದೇಹವನ್ನು ಹೊರ ತೆಗೆಯಲಾಗಿದೆ. ಕ್ಲೀನರ್ ಗೆ ಸಣ್ಣ ಪುಟ್ಟ ಗಾಯಗಳಾಗಿದೆ.  ಚಾಲಕನ ವಿವರ ನಿರೀಕ್ಷಸಲಾಗುತ್ತಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

ಪುಣಚ ಸುತ್ತಮುತ್ತಲಿನಲ್ಲಿ ಹಲವು ಕಲ್ಲಿನ ಕೋರೆಗಳಿಂದ ಕೇರಳ ಕಡೆಗೆ ನಿರಂತರವಾಗಿ ಜಲ್ಲಿ ಸಾಗಾಟ ಮಾಡಲಾಗುತ್ತಿದೆ. ಜಲ್ಲಿ ಕಲ್ಲು ಸಾಗಾಟ ಮಾಡುವ ಲಾರಿಗಳು ಅತೀವೇಗವಾಗಿ ಸಂಚಾರ ಮಾಡುತ್ತಿದೆ. ಇದರಿಂದ ಪಾದಚಾರಿಗಳು ಹಾಗೂ ಚಿಕ್ಕ ಚಿಕ್ಕ ವಾಹನ ಚಾಲಕರು ಆತಂಕಪಡುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News