ಕಾಜೂರು ದರ್ಗಾ ಶರೀಫ್ ನಲ್ಲಿ ಮಾಸಿಕ‌ ಸ್ವಲಾತ್,‌ ಸರಳ ವಿವಾಹ ಕಾರ್ಯಕ್ರಮ

Update: 2020-11-04 16:27 GMT

ಬೆಳ್ತಂಗಡಿ : ಕಾಜೂರು ರಹ್ಮಾನಿಯಾ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ನಲ್ಲಿ‌ ಮಾಸಿಕ‌ ಸ್ವಲಾತ್‌ ಕಾರ್ಯಕ್ರಮ, ಬುರ್ದಾ ಮಜ್ಲಿಸ್, ಎರಡು ಜೊತೆ ಸರಳ ವಿವಾಹ ಹಾಗೂ ನೂತನ ಆವರಣ ಗೋಡೆ ಮತ್ತು ಪ್ರವೇಶ ದ್ವಾರದ ಉದ್ಘಾಟನೆ ನಡೆಯಿತು.

ವಕ್ಫ್ ಬೋರ್ಡ್ ಅನುದಾನದಲ್ಲಿ ನಿರ್ಮಾಣಗೊಂಡ ಆವರಣ ಗೋಡೆ ಮತ್ತು ಪ್ರವೇಶದ್ವಾರದ ಉದ್ಘಾಟನೆಯನ್ನು ಕಾಜೂರು ತಂಙಳ್ ನೆರವೇರಿಸಿದರು.

ಸಮಾರಂಭದಲ್ಲಿ ಕಾಜೂರು‌ ಮುದರ್ರಿಸ್ ಕೆ.ಹೆಚ್ ಸಿರಾಜುದ್ದೀನ್ ಝುಹುರಿ, ಮಾಜಿ ಅಧ್ಯಕ್ಷರಾದ ಕೆ.ಯು‌ ಉಮರ್ ಸಖಾಫಿ, ಕೆ ಶೇಖಬ್ಬ ಕುಕ್ಕಾವು, ಬಿ.ಎ‌ ಯೂಸುಫ್ ಶರೀಫ್, ಮುಹಮ್ಮದ್ ಸಖಾಫಿ ಮತ್ತು ಪಿ.ಎ‌ ಮುಹಮ್ಮದ್, ಕಿಲ್ಲೂರು ಜುಮ್ಮಾ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ಕೆ, ಪ್ರಧಾನ ಕಾರ್ಯದರ್ಶಿ ಕಾಸಿಂ ಮಲ್ಲಿಗೆಮನೆ, ಉಪಾಧ್ಯಕ್ಷ ಅಬೂಬಕ್ಕರ್ ಮಲ್ಲಿಗೆಮನೆ, ಇಬ್ರಾಹಿಂ ಮುಸ್ಲಿಯಾರ್, ಮಾಜಿ ಆಡಳಿತಾಧಿಕಾರಿ ಮುಹಮ್ಮದ್ ರಫಿ, ಆಡಳಿತ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಕೋಶಾಧಿಕಾರಿ ಕೆ.ಎಮ್‌ ಕಮಾಲ್ ಸಹಿತ ಎಲ್ಲಾ ಚುನಾಯಿತ ನಿರ್ದೇಶಕರುಗಳು, ಮೆನೇಜರ್ ಶಮೀಮ್, ಶರೀಫ್ ಸಖಾಫಿ ದಿಡುಪೆ, ಝಕರಿಯಾ ಮುಸ್ಲಿಯಾರ್ ಕುಕ್ಕಾವು, ಮುಸ್ತಫಾ ಝೈನಿ, ಮುಹಮ್ಮದ್ ಆಲಿ, ಕೆ. ಎಮ್ ಅಬೂಬಕ್ಕರ್ ಕುಕ್ಕಾವು, ಹಮೀದ್ ಎನ್.ಎಂ ಮೊದಲಾದವರು ಉಪಸ್ಥಿತರಿದ್ದರು.

ಮಸ್‌ಊದ್ ಸ‌‌ಅದಿ ಪದ್ಮುಂಜ ನೇತೃತ್ವದಲ್ಲಿ ಬುರ್ದಾ ಆಲಾಪನೆ ನಡೆಯಿತು. ಸದರ್ ಉಸ್ತಾದ್ ರಶೀದ್ ಮದನಿ ಸಹಿತ ಅಧ್ಯಾಪಕ ವೃಂದದವರು, ರಹ್ಮಾನಿಯಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ನಾಸಿರ್ ಮಾಸ್ಟರ್ ಉಪ್ಪಿನಂಗಡಿ, ಮೊದಲಾದವರು ಸಹಕರಿಸಿದರು.

ಕಾಜೂರಿಗೆ ಶಾಶ್ವತ ನೀರಿನ ವ್ಯವಸ್ಥೆ ಬಗ್ಗೆ  ಮರ್ಕಝ್ ಸಂಸ್ಥೆಗೆ ತಸ್ಲೀಮ್ ಸಖಾಫಿ ಅವರ ಮೂಲಕ ಮನವಿ ಸಲ್ಲಿಸಲಾಯಿತು. ತಸ್ಲೀಮ್ ಸಖಾಫಿ ಮತ್ತು  ಗುತ್ತಿಗೆದಾರ ಯಾಕೂಬ್ ಅಜಿಕುರಿ ನಾವೂರು ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಸ್ಜಿದ್ ಮುಅದ್ದಿನ್ ಅವರ ಪುತ್ರಿ ಸೇರಿದಂತೆ ಎರಡು ಜೊತೆ ಸರಳ ವಿವಾಹ ನೆರವೇರಿತು. ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದ ಕಾಜೂರು ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿದರು. ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ವಂದನಾರ್ಪಣೆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News