ನ. 8ರಂದು ‘ಹೊಟೇಲ್ ಮಣಿಪಾಲ್ ಇನ್’ನಲ್ಲಿ ‘ಉಡುಪಿ ರಸೋಯಿ’ ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ಪುನಾರಂಭ
ಉಡುಪಿ, ನ. 6: ನಗರದ ಕರಾವಳಿ ಬೈಪಾಸ್‌ನ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿರುವ ಪ್ರತಿಷ್ಠಿತ ‘ಮಣಿಪಾಲ್ ಇನ್’ ಹೊಟೇಲ್‌ನಲ್ಲಿ ‘ಉಡುಪಿ ರಸೋಯಿ’ ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ಮಂಗಳೂರಿನ ಚಟ್ನಿ ಸಂಸ್ಥೆಯ ನಿರ್ವಹಣೆಯಲ್ಲಿ ನ.8ರಂದು ಹೊಸತನದೊಂದಿಗೆ ಪುನಾರಂಭಗೊಳ್ಳಲಿದೆ.
ಹೊಟೇಲಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಣಿಪಾಲ ಇನ್ ಆಡಳಿತ ನಿರ್ದೇಶಕ ಇಬ್ರಾಹಿಂ ಗೋವಾ, ಚಟ್ನಿ ಸಂಸ್ಥೆಯು ಕಳೆದ 13ವರ್ಷಗಳಿಂದ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಉತ್ತಮ ಗುಣಮಟ್ಟದ ರುಚಿಕರ ಊಟ, ತಿಂಡಿತಿನಿಸುಗಳಿಗೆ ಪ್ರಖ್ಯಾತಿ ಪಡೆದಿದೆ. ಉಡುಪಿ ರಸೋಯಿ ಪ್ರತ್ಯೇಕವಾದ ಅತ್ಯಾಧುನಿಕ ಕಿಚನ್ ಹೊಂದಿರುತ್ತದೆ. ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್ ಸೇರಿದಂತೆ ವಿವಿಧ ಶೈಲಿಯ ಊಟ ತಿನಿಸುಗಳು ಇಲ್ಲಿ ದೊರೆಯುತ್ತದೆ ಎಂದರು.
ಮಣಿಪಾಲ ಇನ್‌ನಲ್ಲಿರುವ ಮೊಗಲ್ ಮತ್ತು ರಾಜಪೂತ ಸಂಸ್ಕೃತಿಯಿಂದ ಪ್ರಭಾವಿತವಾಗಿರುವ ‘ವಿರಾಸತ್ ಫೈನ್ ಡೈನ್ ನಾನ್‌ವೆಜ್ ರೆಸ್ಟೋರೆಂಟ್’ ನ್ನು ಮಂಗಳೂರಿನ ಪ್ರಸಿದ್ಧ ರೋಯಲ್ ಕಿಚನ್ ನಿರ್ವಹಿಸಲಿದೆ. ಇಲ್ಲಿಯೂ ಅತ್ಯುತ್ತಮ ಗುಣಮಟ್ಟದ ರುಚಿಕರ ಖಾದ್ಯಗಳು ಲಭ್ಯ ಇವೆ ಎಂದು ಅವರು ತಿಳಿಸಿದರು.
ಮಣಿಪಾಲ ಇನ್ ಹೊಟೇಲ್ ಆ್ಯಂಡ್ ಕನ್‌ವೆನ್ಶನ್ ಸೆಂಟರ್‌ನಲ್ಲಿ ಮದುವೆ, ಬರ್ತ್‌ಡೆ, ಪಾರ್ಟಿ ಮೊದಲಾದ ಸಮಾರಂಭಗಳಿಗೆ ಅನುಕೂಲ ವಾದ ಕನಿಷ್ಠ 50ರಿಂದ 3000ವರೆಗೆ ಜನ ಪಾಲ್ಗೊಳ್ಳಲು ಅವಕಾಶ ಇರುವ ಅತ್ಯಾಧುನಿಕ ವಿನ್ಯಾಸದ ಮತ್ತು ವಿಶಾಲ ಸ್ಥಳಾವಕಾಶ ಇರುವ ಹವಾನಿಯಂತ್ರಿತ ಗ್ರ್ಯಾಂಡ್ ಮಿಲೇನಿಯಮ್ ಕನ್ವೆಶನ್ ಸೆಂಟರ್, ‘ಸಮ್ಮೇಳನ’ ಬ್ಯಾಂಕ್ವೆಟ್ ಹಾಲ್, ‘ಝಿಹಾ’ ಬ್ಯಾಂಕ್ವಟ್ ಹಾಲ್, ‘ಸಿಂಡ್ರೆಲ್ಲಾ’ ಎಂಬ ನಾಲ್ಕು ಸಭಾಂಗಣ ಮತ್ತು ಒಂದು ‘ಮೀಟಿಂಗ್ ಲಾಂಜ್’ ಇದೆ. ಹೊಟೇಲಿನಲ್ಲಿ ಒಟ್ಟು 35 ಲಕ್ಸುರಿ ರೂಮ್‌ಗಳಿದ್ದು, 250-300 ವಾಹನಗಳು ನಿಲ್ಲಿಸಲು ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇದೆ ಎಂದು ಅವರು ಹೇಳಿದರು.
ನಮ್ಮ ಹೊಟೇಲ್ ಅತ್ಯಂತ ದುಬಾರಿ ಎಂಬ ತಪ್ಪು ಕಲ್ಪನೆ ಜನರಲ್ಲಿ ಇದೆ. ಆದರೆ ನಮ್ಮ ರೆಸ್ಟೋರೆಂಟ್ ಮತ್ತು ಸಭಾಂಗಣಗಳಲ್ಲಿ ಎಲ್ಲ ಸ್ತರದ ಜನರಿಗೆ ಬೇಕಾದ ರೀತಿಯ ಹಾಗೂ ಕೈಗೆಟಕುವ ಬೆಲೆಯಲ್ಲಿ ಸೌಲಭ್ಯಗಳು ದೊರೆಯು ತ್ತದೆ. ಜನರಿಗೆ ಉತ್ತಮ ಸೇವೆ ನೀಡುವ ಮುಖ್ಯ ಉದ್ದೇಶ ಇಟ್ಟುಕೊಂಡು ಈ ಉದ್ಯಮವನ್ನು ಆರಂಭಿಸಿದ್ದೇವೆ. ಅದರ ಪ್ರಯೋಜನವನ್ನು ಎಲ್ಲರು ಪಡೆಯ ಬೇಕು ಎಂದು ಅವರು ತಿಳಿಸಿದರು.
ದೀಪಾ ಕಂಫರ್ಟ್ಸ್‌ನ ಕಾರ್ತಿಕ್ ಆರ್.ಅಮೀನ್ ಮಾತನಾಡಿ, ರೆಸ್ಟೋ ರೆಂಟ್‌ನಲ್ಲಿ ಕಡಿಮೆ ದರ ಇದ್ದರೂ ಕೂಡ ಆಹಾರದ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಇರುವುದಿಲ್ಲ. ಗ್ರಾಹಕರಿಗೆ ಉತ್ತಮ ಊಟ, ತಿಂಡಿತಿನಿಸುಗಳನ್ನು ನೀಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ನಮ್ಮಲ್ಲಿ ನುರಿತ, ಅನುಭವವುಳ್ಳ ಬಾಣಸಿಗರು ಮತ್ತು ಸಿಬ್ಬಂದಿಗಳಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೀಪಾ ಕಂಫರ್ಟ್ಸ್‌ನ ಪ್ರಧಾನ ವ್ಯವಸ್ಥಾಪಕ ಕೆ.ಜನಾರ್ದನ ರಾವ್ ಉಪಸ್ಥಿತರಿದ್ದರು.