ವಿವಿಧ ಬೇಡಿಕೆ ಈಡೇರಿಕೆಗೆ ಶಿಕ್ಷಣ ಸಚಿವರಿಗೆ ಮನವಿ

Update: 2020-11-07 12:40 GMT

ಮಂಗಳೂರು,ನ.7: ವಿಕಲಚೇತನರ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿಕ್ಷಣ ಸಚಿವ ಸುರೇಶ ಕುಮಾರ್‌ಗೆ ಅವರ ಕಚೇರಿಯಲ್ಲಿ ವಿಕಲಚೇತನ ನೌಕರರ ಸಂಘದ ಮನವಿ ಪತ್ರ ಸಲ್ಲಿಸಲಾಯಿತು.

ಶಿಕ್ಷಕರ ವರ್ಗಾವಣೆಯ ಸಮಯದಲ್ಲಿ ವಿಕಲಚೇತನ ಶಿಕ್ಷಕರಿಗೆ ಅವರ ಅಂಗವೈಕಲ್ಯತೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣ ಪತ್ರವನ್ನು ಪ್ರತಿ ಬಾರಿ ತರಲು ಸೂಚಿಸುವ ಕ್ರಮವನ್ನು ಕೈಬೀಡಬೇಕು. ಈ ವಿಷಯದ ಈ ಹಿಂದೆ ಹಲವು ಶಿಕ್ಷಣ ಸಚಿವರಿಗೂ ಮನವಿ ಮಾಡಿದರು ಕೂಡಾ ಯಾವುದೇ ಪ್ರಯೋಜವಾಗಿಲ್ಲ.ಕೂಡಲೇ ಪದೇ ಪದೇ ವೈದ್ಯಕೀಯ ಪ್ರಮಾಣ ಪತ್ರ ಕೇಳುವುದನ್ನು ನಿಲ್ಲಿಸಬೇಕು,ಮೂರು ವರ್ಷ ಒಂದು ಕಡೆಯಲ್ಲಿ ಕಾರ್ಯನಿರ್ವಹಿಸಬೇಕು ಎಂಬ ನಿಯಮದಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡಬೇಕು. ಘಟಕದ ಹೊರಗೆ ಎರಡು ಬಾರಿ ವರ್ಗಾವಣೆ ಹೊಂದಲು ಅವಕಾಶ ನೀಡಬೇಕು. ಭಡ್ತಿ ನೀಡುವ ಸಮಯದಲ್ಲಿ ವಿಕಲಚೇತನ ಶಿಕ್ಷಕರಿಗೆ ಎ ಮತ್ತು ಬಿ ವಲಯಗಳ ಹುದ್ದೆಗಳನ್ನು ತೋರಿಸಬೇಕು. ಯುಡಿಐಡಿ ಕಾರ್ಡ್ ಹೊಂದಿರುವ ಶಿಕ್ಷಕರಿಗೆ ಪದೇ ಪದೇ ಪ್ರಮಾಣ ಪತ್ರ ಕೇಳಬಾರದು. ಸೇವಾ ಪುಸ್ತಕದಲ್ಲಿ ವಿಕಲಚೇತನರ ಸಂಪೂರ್ಣವಾದ ಮಾಹಿತಿಯನ್ನು ಭರ್ತಿ ಮಾಡಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪಅಂಡಗಿ ಚಿಲವಾಡಗಿ ಹೇಳಿದರು.

ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ಕೊಪ್ಪಳ ಜಿಲ್ಲಾ ಖಜಾಂಚಿ ಕಾಶಿನಾಥ ಶಿರಿಗೇರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News