ಕಾಮಗಾರಿ ತಡೆಹಿಡಿಯಲು ಮನವಿ
Update: 2020-11-08 12:16 GMT
ಮಂಗಳೂರು, ನ.8: ನಗರದ ಗಡಿಯಾರ ಗೋಪುರದಿಂದ ಆರ್‌ಟಿಒ ಕಚೇರಿವರೆಗಿನ ಮೂರು ಪಥದ ಕಾಂಕ್ರಿಟ್ ರಸ್ತೆಯ ಪಕ್ಕದ ಫುಟ್‌ಪಾತ್ ಕಾಮಗಾರಿ ತಡೆಹಿಡಿಯಬೇಕು ಎಂದು ಬಿಜೆಪಿ ಅತ್ತಾವರ ವಾರ್ಡ್‌ನ ಮಾಜಿ ಅಧ್ಯಕ್ಷ ಭಾಸ್ಕರ್ ಕಿರಣ್ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಅಧ್ಯಕ್ಷ ಪೊನ್ನುರಾಜ್ ವಿ.ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ರಸ್ತೆಯು ಈಗಾಗಲೇ ಸಾಕಷ್ಟು ಅಗಲದ ಫುಟ್‌ಪಾತ್ ಹೊಂದಿದೆ. ಅದನ್ನು ಇನ್ನಷ್ಟು ಅಗಲಗೊಳಿಸುವುದರಿಂದ ಮೂರು ಪಥದ ಕಾಂಕ್ರಿಟ್ ರಸ್ತೆಯು ಕಿರಿದಾಗಲಿದೆ. ರಸ್ತೆ ದಟ್ಟಣೆಯಿಂದಾಗಿ ಟ್ರಾಫಿಕ್ ಜಾಾಮ್ ಉಂಟಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.