ಇನೋಳಿ ಬಿ ಸೈಟ್ ಮದ್ರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

Update: 2020-11-08 15:35 GMT

ಮಂಗಳೂರು, ನ.8: ಯುವಸಮುದಾಯ ಅಮಲು ವಸ್ತುಗಳ ದಾಸರಾಗುತ್ತಿರುವುದು ಖೇದಕರ. ಯುವಕರು ಧಾರ್ಮಿಕ ಕಾರ್ಯದಿಂದ ದೂರವಿರುವುದರಿಂದ ಆಪತ್ತು ಎದುರಾಗಿದೆ ಎಂದು ಇನೋಳಿ ಜಾಮಿಯಾ ಮುಬಾರಕ್ ಮಸೀದಿಯ ಖತೀಬ್ ಯು.ಕೆ. ಅಬೂಬಕ್ಕರ್ ಮದನಿ ಹೇಳಿದರು.

ಮೀಲಾದುನ್ನಬಿ ಪ್ರಯುಕ್ತ ಇನೋಳಿ ಬಿ ಸೈಟ್ ಮಸ್ಜಿದುರ್ರಹ್ಮಾನ್‌ನಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಹಿದಾಯತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಇಕ್ಬಾಲ್ ಸಾಮಣಿಗೆ, ಇನೋಳಿ ಜಾಮಿಯಾ ಮುಬಾರಕ್ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಸದರ್ ಮುಅಲ್ಲಿಮರಾದ ಹಮೀದ್ ಅಝ್ಹರಿ, ಜತೆ ಕಾರ್ಯದರ್ಶಿ ಅನ್ಸಾರ್ ಮಕ್ರಿ, ಕೋಶಾಧಿಕಾರಿ ಶಬೀರ್, ಅಕ್ರಂ ಇನೋಳಿ, ಸಮದ್ ಮುಕ್ರಿ, ಬಿ ಸೈಟ್ ಮಸ್ಜಿದುರ್ರಹ್ಮಾನ್ ಗೌರವಾಧ್ಯಕ್ಷ ಹಮೀದ್ ಉಂಞ, ಅಧ್ಯಕ್ಷ ಟಿ.ಎಚ್.ನಝೀರ್, ಕಾರ್ಯದರ್ಶಿ ಹುಸೈನ್ ಬಾವು, ಇಸ್ಮಾಯಿಲ್ ಮೋನು, ರಝಾಕ್ ಬಿ ಸೈಟ್, ಅಬೂಬಕ್ಕರ್ ಉಪಸ್ಥಿತರಿದ್ದರು.

ಬಿ ಸೈಟ್ ಮದ್ರಸದ ಸದರ್ ಮುಅಲ್ಲಿಂ ಅಶ್ರಫ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News