ಉಡುಪಿ : ‘ಬ್ರೈಡಲ್ ವರ್ಲ್ಡ್’ ನವೀಕೃತ ಬಟ್ಟೆ ಮಳಿಗೆ ಶುಭಾರಂಭ

Update: 2020-11-09 05:39 GMT

ಉಡುಪಿ, ನ.9: ನಗರದ ಹೃದಯಭಾಗದಲ್ಲಿರುವ ಸಿಟಿಬಸ್ ನಿಲ್ದಾಣ ಸಮೀಪದ ಮಸೀದಿ ರಸ್ತೆಯ ಅಕ್ಷಯ ಟವರ್‌ನಲ್ಲಿ ಹೊಸತನದೊಂದಿಗೆ ಪುನಾರಂಭಗೊಂಡ ಬಟ್ಟೆಮಳಿಗೆ ‘ಬ್ರೈಡಲ್ ವರ್ಲ್ಡ್’ ದಿ ಡಿಸೈನರ್ ಶಾಪ್ ಇಂದು ಶುಭಾರಂಭಗೊಂಡಿತು.

ಮಳಿಗೆಯನ್ನು ಫೋರ್ಟ್ ಗೇಟ್ ಏಜ್ಯುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ನೀತಾ ಶೆಟ್ಟಿ ಉದ್ಘಾಟಿಸಿ, ಶುಭಹಾರೈಸಿದರು. ಬ್ರಹ್ಮಾವರ ಮಟಪಾಡಿ ಜುಮಾ ಮಸೀದಿಯ ಖತೀಬ್ ಅಬ್ದುಲ್ ಮಜೀದ್ ಸಖಾಫಿ ದುವಾ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಫೋರ್ಟ್ ಗೇಟ್ ಏಜ್ಯುಕೇಶನ್ ಟ್ರಸ್ಟ್‌ನ ಚೈಯರ್‌ಮೆನ್ ಅಭಿನಂದನ್ ಶೆಟ್ಟಿ ಮಾತನಾಡಿ, ಸತತ ಪರಿಶ್ರಮ, ನಿಷ್ಠೆ, ಪ್ರಾಮಾಣಿಕತೆಯಿಂದ ಉದ್ಯಮದಲ್ಲಿ ಯಶಸ್ಸು ಸಾಧ್ಯ. ಇದೇ ರೀತಿ ಬ್ರೈಡಲ್ ವರ್ಲ್ಡ್ ಒಂದು ಬ್ರಾಂಡ್ ಆಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಮತ್ತು ಇದರ ಸೇವೆ ಇತರ ಜಿಲ್ಲೆಗಳಿಗೂ ವ್ಯಾಪಿಸಲಿ ಎಂದು ಹಾರೈಸಿದರು.

ಉಡುಪಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಪ್ರಬಂಧಕ ಗುರುರಾಜ್ ಹೊನ್ನುನಸಿ, ಉಡುಪಿ ತುಳುಕೂಟದ ಮಾಜಿ ಉಪಾಧ್ಯಕ್ಷೆ ವಿದ್ಯಾ ಸರಸ್ವತಿ, ಉದ್ಯಮಿ ಹೇಮಂತ್ ಅಮೀನ್ ಶುಭ ನುಡಿಗಳನ್ನಾಡಿದರು. ಬ್ರೈಡಲ್ ವರ್ಲ್ಡ್ ಮಾಲಕ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು. ಹಫೀಝ್ ರಹ್ಮಾನ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಬ್ರೈಡಲ್ ವರ್ಲ್ಡ್ ಕಳೆದ 13 ವರ್ಷಗಳಿಂದ ಉಡುಪಿ ಹಾಗೂ ಕುಂದಾಪುರ ದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿದೆ. ಉಡುಪಿಯ ನವೀಕೃತ ಮಳಿಗೆಯು ನೆಲ ಮತ್ತು ಮೊದಲ ಮಹಡಿಯಲ್ಲಿ ಒಟ್ಟು 4500 ಚದರ ಅಡಿ ವಿಸ್ತ್ರೀರ್ಣವನ್ನು ಹೊಂದಿದೆ.

ಮಹಿಳೆಯರ, ಮಕ್ಕಳ ಅಪೂರ್ವ, ನವನವೀನ ಶೈಲಿಯ ಉಡುಪುಗಳ ಸಂಗ್ರಹ ಹೊಂದಿರುವ ಬ್ರೈಡಲ್ ವರ್ಲ್ಡ್‌ನಲ್ಲಿ ‘ರೀಹಾ ಫ್ಯಾಶನ್’ ಹಾಗೂ ‘ಬೇಬಿ ವರ್ಲ್ಡ್’ ಎಂಬ ಪ್ರತ್ಯೇಕ ವಿಭಾಗಗಳಿವೆ. ಇಲ್ಲಿ ಸಾರಿ, ಸಲ್ವಾರ್, ಕುರ್ತಿಸ್, ಸಲ್ವಾರ್ ಮೆಟಿರಿಯಲ್ಸ್, ಗೌನ್, ಜಿಟಿಎಸ್ ಶರ್ಟ್ಸ್, ಪ್ಯಾಂಟ್, ಕಿಡ್ಸ್ ಫ್ರಾಕ್, ಗೌನ್, ಕಿಡ್ಸ್ ಟಾಯ್ಸ್, ಅಭಯ ಲಭ್ಯ ಇವೆ.

ಅತ್ಯುತ್ತಮ ದರ್ಜೆಯ ಹಾಗೂ ಗುಣಮಟ್ಟದ ಸಿದ್ಧ ಉಡುಪುಗಳ ಸಂಗ್ರಹ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಮನೆ ಮಾತನಾಗಿರುವ ಬ್ರೈಡಲ್ ವರ್ಲ್ಡ್‌ನಲ್ಲಿ, ಮದುವೆಗೆ ಸಂಬಂಧಿಸಿದ ಹೊಸ ಡಿಸೈನ್‌ಗಳ ಬಟ್ಟೆಗಳು, ಮಹಿಳೆಯರ ಬೇಡಿಕೆಗೆ ಅನುಗುಣವಾಗಿ ಹಾಗೂ ಅಭಿರುಚಿಗೆ ತಕ್ಕಂತೆ ಹೊಸ ಮಾದರಿಯ ಉಡುಪುಗಳು ಕೂಡ ಲಭ್ಯ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News