ಗುರುಪುರ ಕೈಕಂಬದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ

Update: 2020-11-09 10:04 GMT

ಮಂಗಳೂರು :  ಗ್ರೀನ್ ಹ್ಯಾಂಡ್ಸ್ ಎನ್ವಿರಾನ್ಮೆಂಟಲ್ ಟೀಮ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ತೇಜಶ್ವಿನಿ ಲಯನ್ಸ್ ಬ್ಲಡ್ ಬ್ಯಾಂಕ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಶೇಖ್ ಸಬಾ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾ ಕುವೈತ್ ಸ್ಮರಣಾರ್ಥ ಗುರುಪುರ ಕೈಕಂಬದಲ್ಲಿ "ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ" ಹಾಗೂ ಸನ್ಮಾನ ಕಾರ್ಯಕ್ರಮವು ರವಿವಾರ ನಡೆಯಿತು.

ಮುಹಮ್ಮದ್ ಆಸೀಫ್ ಸೂರಲ್ಪಾಡಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಎಎಚ್ ನೌಷಾದ್ ಹಾಜಿ ಸುರಲ್ಪಾಡಿ ಉದ್ಘಾಟಿಸಿ, ಅಬೂ ಝೈದ್ ಶಾಫಿ ಮದನಿ ಕರಾಯ ದುಆ ಆಶಿರ್ವಚನಗೈದರು.

ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣವನ್ನು ನೀಡುತ್ತಾ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪುರಸ್ಕೃತ ಆದರ್ಶ್ ವಿದ್ಯಾಸಂಸ್ಥೆ ತೋಡಾರು ಮತ್ತು ಅಲ್ ಬಿರ್ರ್ ಪ್ರಿ ಇಸ್ಲಾಮಿಕ್ ಸ್ಕೂಲ್ ಗುರುಪುರ ಕೈಕಂಬ ಇದರ ಅಧ್ಯಕ್ಷರಾಗಿರುವ ಮುಹಮ್ಮದ್ ಆಸೀಫ್ ಸೂರಲ್ಪಾಡಿ ಹಾಗೂ ದ.ಕ ಜಿಲ್ಲೆಯಲ್ಲಿ "ಮೈ ಸಿಸ್ಟರ್ ಅಭಿಯಾನದ" ಮೂಲಕ ಹಲವಾರು ಬಡ ಅಸಹಾಯಕ ಸಹೋದರಿಯರ ಮುಖದಲ್ಲಿ ಮಂದಹಾಸದ ನಗೆಯನ್ನು ಬೀರಲು ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ಸಹಾಯ ಹಸ್ತ ನೀಡಿದ ಸಲುವಾಗಿ ಅಧ್ಯಕ್ಷರಾದ ಎ.ಎಚ್ ನೌಷಾದ್ ಹಾಜಿ ಸೂರಲ್ಪಾಡಿಯವರನ್ನು ಸನ್ಮಾನಿಸಲಾಯಿತು.

ಶಿಬಿರದಲ್ಲಿ 30 ಮಂದಿ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುಪಿ ಇಬ್ರಾಹಿಂ ಅಡ್ಡೂರು, ಶೇಖ್ ಇಬ್ರಾಹಿಂ ಸುಳ್ಯ, ಆಸೀಫ್ ಕೋಟೆಬಾಗಿಲು, ಉಸ್ಮಾನ್ ಗುರುಪುರ, ಎಕೆ ಆರಿಸ್ ಅಡ್ಡೂರು, ಆರ್ ಎಸ್ ಝಾಕಿರ್ ಸುರಲ್ಪಾಡಿ, ಎನ್ ಎಚ್ ಫಯಾಝ್ ಗಂಜಿಮಠ, ಸಾಬಿಕ್ ಅಡ್ಡೂರು, ಡಾ. ಇಕೆಎ ಸಿದ್ದೀಕ್ ಅಡ್ಡೂರು, ಎಂ. ಶರೀಫ್ ಅಡ್ಡೂರು, ಜಿ.ಎಂ.ಇಂತಿಯಾಝ್ ಗಂಜಿಮಠ  ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ  ಇದರ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.

ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News