ಕೈಗಾರಿಕಾ ವಲಯಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ : ತಾಪಂ ಕೆಡಿಪಿ ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್

Update: 2020-11-09 14:01 GMT

ಉಡುಪಿ, ನ.9: ಕಾಪು ವಿಧಾನಸಭಾ ಕ್ಷೇತ್ರಗಳಲ್ಲಿರುವ ನಂದಿಕೂರು, ಬೆಳಪು ಸಹಿತ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕೆಂಬ ಕಾನೂನು ಇದೆ. ಆದರೂ ಹಲವು ಕೈಗಾರಿಕಾ ಸಂಸ್ಥೆಗಳು ಇದನ್ನು ಉಲ್ಲಂಘಿಸುತ್ತಿವೆ. ಸದ್ಯ ಎಷ್ಟು ಮಂದಿ ಸ್ಥಳೀಯರಿಗೆ ಇಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂಬ ಬಗ್ಗೆ ವರದಿಯೊಂದನ್ನು ಸಲ್ಲಿಸುವಂತೆ ಕಾಪು ಶಾಸಕ ಲಾಲಾಜಿ ಮೆಂಡನ್ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ತೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ಕೈಗಾರಿಕಾ ವಲಯದಲ್ಲೂ ಭೂಮಿ ಕಳೆದುಕೊಂಡ ಸ್ಥಳೀಯರು ಹಾಗೂ ಸ್ಥಳೀಯ ಆಕಾಂಕ್ಷಿ ಗಳಿಗೆ ಉದ್ಯೋಗ ಕಲ್ಪಿಸಬೇಕು ಎಂದವರು ಹೇಳಿದರು.

ಉಡುಪಿ ತಾಲೂಕು ಪಂಚಾಯತ್ ಸಾಂಗಣದಲ್ಲಿಸೋಮವಾರತಮ್ಮಅ್ಯಕ್ಷತೆಯಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ತೈಮಾಸಿಕ ಕೆಡಿಪಿ ಸೆಯಲ್ಲಿಅವರುಮಾತನಾಡಿದರು.ಪ್ರತಿಕೈಗಾರಿಕಾವಲಯದಲ್ಲೂೂಮಿ ಕಳೆದುಕೊಂಡ ಸ್ಥಳೀಯರು ಹಾಗೂ ಸ್ಥಳೀಯ ಆಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸಬೇಕು ಎಂದವರು ಹೇಳಿದರು. ಉಡುಪಿ ತಾಲೂಕಿನಲ್ಲಿ ಇತ್ತೀಚೆಗೆ ಉಂಟಾದ ನೆರೆಗೆ 79 ಮನೆಗಳು ಸಂಪೂರ್ಣವಾಗಿ ಹಾನಿಗೊಂಡಿದ್ದರೆ, 130 ಮನೆಗಳು ಭಾಗಶಃ, 135 ಅಲ್ಪ ಪ್ರಮಾಣದಲ್ಲಿ ಹಾನಿಗೊಂಡಿದ್ದು ಸೇರಿ ಒಟ್ಟು 344 ಮನೆಗಳಿಗೆ ಹಾನಿಯಾಗಿವೆ. 2.5ಲಕ್ಷ ರೂ.ಗಳಿಗೂ ಅಧಿಕ ಪರಿಹಾರ ನೀಡಲಾಗಿದೆ. ಆರ್‌ಟಿಸಿ ಸಮಸ್ಯೆ ಹಾಗೂ ಅಸಮರ್ಪಕ ದಾಖಲೆಯಿಂದಾಗಿ ಕೆಲವರಿಗೆ ಪರಿಹಾರ ವಿತರಣೆ ವಿಳಂಬವಾಗಿದೆ ಎಂದು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮಾಹಿತಿ ನೀಡಿದರು.

ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಸಮರ್ಥವಾಗಿ ಎದುರಿಸಲು ಜಿಲ್ಲೆಗೆ ಉತ್ತಮ ಟಾಸ್ಕ್‌ಫೋರ್ಸ್‌ನ ಅಗತ್ಯವಿದೆ. ಈ ಬಾರಿ ನೆರೆಹಾನಿ ಸಂದರ್ಭದಲ್ಲಿ ಜಿಲ್ಲಾಡಳಿತ, ಸಂಘ-ಸಂಸ್ಥೆ, ಸ್ಥಳೀಯರು ರಕ್ಷಣಾಕಾರ್ಯದಲ್ಲಿ ಉತ್ತಮ ರೀತಿ ಯಲ್ಲಿ ಸಹಕರಿಸಿದ್ದಾರೆ. ಕೊರೊನಾದಿಂದಾಗಿ ಆದಾಯ, ಪರಿಹಾರದ ಮೂಲ ಗಳು ನಿಂತುಹೋಗಿದ್ದು, ಇಲಾಖೆಗಳು ಇದ್ದ ಸಂಪನ್ಮೂಲವನ್ನು ಸೂಕ್ತ ರೀತಿಯಲ್ಲಿ ವಿನಿಯೋಗ ಮಾಡಬೇಕು ಎಂದು ಲಾಲಾಜಿ ಮೆಂಡನ್ ನುಡಿದರು.

ವರದಿ ನೀಡಿ:  ಅಲೆವೂರಿನಲ್ಲಿ 1.60 ಕೋ.ರೂ.ವೆಚ್ಚದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿಯ ಬಗ್ಗೆ ಇದುವರೆಗೂ ವರದಿ ನೀಡಿಲ್ಲ. ಶೀಘ್ರದಲ್ಲಿಯೇ ವರದಿ ಸಿದ್ದಪಡಿಸಿ ನೀಡುವಂತೆ ಲಾಲಾಜಿ ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್ ಅಧಿಕಾರಿ ಗಳಿಗೆ ತಿಳಿಸಿದರು.

ನರೇಗಾ ಯೋಜನೆಯಿಂದ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿಯೂ ಪೌಷ್ಟಿಕ ತೋಟ ನಿರ್ಮಾಣ ಮಾಡಬೇಕು. ಇದಕ್ಕೆ ಪಂಚಾಯತ್ ನೆರವನ್ನು ಪಡೆದುಕೊಳ್ಳಬೇಕು. ಪರಿಸರ ಪೂರಕ ವಾತಾವರಣ ನಿರ್ಮಾಣಕ್ಕೆ ಇದು ಅಗತ್ಯ. ಈ ಬಗ್ಗೆ ಶೀಘ್ರ ಕಾಯೋನ್ಮುಖವಾಗುವಂತೆ ಮೋಹನ್‌ರಾಜ್ ತಿಳಿಸಿದರು.

ಯೋಜನೆ ಸದುಪಯೋಗ:  ನರೇಗಾ ಯೋಜನೆಯ ಮೂಲಕ ಹಲವಾರು ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಬಚ್ಚಲು ಗುಂಡಿ ನಿರ್ಮಾಣಕ್ಕೆ ಕುಟುಂಬವೊಂದಕ್ಕೆ 14 ಸಾವಿರ ರೂ., ವಸ್ತುಗಳಿಗಾಗಿ 8,300 ರೂ. ಹಾಗೂ 5,700ರೂ.ಕೂಲಿ ಸಿಗುತ್ತದೆ. ಇಂತಹ ಹಲವಾರು ಸೌಲಭ್ಯ ಗಳು ಲಭ್ಯವಿದ್ದು ಜನರು ಇದನ್ನು ಸದುಪಯೋಗಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶಿಕ್ಷಣ ಇಲಾಖೆಯ ಸೇರ್ಪಡೆ-ಮಾರ್ಪಾಡು ಯೋಜನೆಯಲ್ಲಿ ಶಾಲೆಗಳಿಗೆ ಶೌಚಾಲಯ ನಿರ್ಮಾಣ ಸಹಿತ ವಿವಿಧ ಕಾಮಗಾರಿಗಳು 2019ನೇ ಸಾಲಿನಲ್ಲಿ ನಡೆದಿದ್ದು, ಬಿಲ್‌ಗಳು ಸಮಯ ಮೀರಿದ್ದರಿಂದ ಹಣ ಇನ್ನೂ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರದಲ್ಲಿ ಹಣ ಬಿಡುಗಡೆ ಯಾಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಇಒ ಮಂಜುಳಾ ಮನವಿ ಮಾಡಿದರು.ಈ ಬಗ್ಗೆ ಪರಿಶೀಲಿಸುವುದಾಗಿ ಕಾರ್ಯನಿರ್ವಹಣಾಧಿ ಕಾರಿ ತಿಳಿಸಿದರು.

ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಉಪಾಧ್ಯಕ್ಷ ಶರತ್ ಬೈಲಕೆರೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶಿಲ್ಪಾ ರವೀಂದ್ರ ಕೋಟ್ಯಾನ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News