ಉಡುಪಿ: ನ.10ರಂದು ಸಾಮಗರಿಗೆ ನುಡಿನಮನ
Update: 2020-11-09 15:27 GMT
ಉಡುಪಿ, ನ.9: ಕಳೆದ ಶನಿವಾರ ನಿಧನರಾದ ಖ್ಯಾತ ಯಕ್ಷ ಕಲಾವಿದ, ಕಲಾ ಸಂಘಟಕ ಎಂ. ಆರ್. ವಾಸುದೇವ ಸಾಮಗ ಅವರಿಗೆ ನುಡಿ ನಮನ ನ.10ರ ಮಂಗಳವಾರ ಸಂಜೆ 5:30ಕ್ಕೆ ಉಡುಪಿ ರಥಬೀದಿಯಲ್ಲಿರುವ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಜರಗಲಿದೆ.
ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ವಾಸುದೇವ ರಂಗಾ ಭಟ್ ನುಡಿ ನಮನ ಸಲ್ಲಿಸಿ ಮಾತನಾಡಲಿದ್ದಾರೆ ಎಂದು ಕಲಾರಂಗದ ಎಂ.ಗಂಗಾಧರ ರಾವ್ ಹಾಗೂ ಮುರಲಿ ಕಡೆಕಾರ್ ತಿಳಿಸಿದ್ದಾರೆ.