ಮಣಿಪಾಲ: ಡಾ.ಎನ್.ಉಡುಪರ ಪುಸ್ತಕ ಬಿಡುಗಡೆ

Update: 2020-11-09 15:31 GMT

ಮಣಿಪಾಲ, ನ.9: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯ ಮಾಜಿ ಸಂಶೋಧನಾ ನಿರ್ದೇಶಕ ಹಾಗೂ ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯೂಟಿಕಲ್ ಸಾಯನ್ಸ್‌ನ ಪ್ರೊಪೆಸರ್ ಡಾ.ಎನ್. ಉಡುಪ ಅವರ ಕೃತಿ ‘ಭಾರತದ ಹಿರಿಮೆಯ ವಿಶ್ವವಿದ್ಯಾನಿಲಯಗಳ ಸ್ಥಾಪನೆ’ ಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.

ಸೋಮವಾರ ಈ ಕೃತಿಯನ್ನು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್. ಬಲ್ಲಾಳ್ ಹಾಗೂ ಕುಲಪತಿ ಲೆ.ಜ. ಡಾ.ಎಂ.ಡಿ.ವೆಂಕಟೇಶ್ ಬಿಡುಗಡೆಗೊಳಿ ಸಿದರು.

ಡಾ.ಬಲ್ಲಾಳ್ ಮಾತನಾಡಿ, ಈ ಕೃತಿ ಸಾಕಷ್ಟು ಮಾಹಿತಿಗಳೊಂದಿಗೆ ಭಾರತದ ಹಿರಿಮೆಯ ಪ್ರಮುಖ ವಿಶ್ವವಿದ್ಯಾಲಯಗಳ ಕುರಿತಂತೆ ಸಮಗ್ರ ಮಾಹಿತಿಗಳನ್ನೊಳಗೊಂಡಿದೆ ಎಂದರು. ದೇಶದಲ್ಲಿ ವಿವಿಗಳ ರ್ಯಾಂಕಿಂಗ್ ನಿರ್ಣಾಯಕ ಎನಿಸಿರುವ ಇಂದಿನ ಸಂದರ್ಭದಲ್ಲಿ ಇಂಥ ಪುಸ್ತಕ ತಂದಿರುವುದ ಕ್ಕಾಗಿ ಡಾ.ವೆಂಕಟೇಶ್ ಅವರು ಡಾ.ಉಡುಪರನ್ನು ಅಭಿನಂದಿಸಿದರು.

ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಪಿಎಲ್‌ಎನ್‌ಜಿ ರಾವ್, ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಡಾ.ವಿನೋದ್ ಭಟ್, ಕಾರ್ಪೋರೇಟ್ ರಿಲೇಷನ್ಸ್‌ನ ನಿರ್ದೇಶಕ ಡಾ.ರವಿರಾಜ್ ಎನ್.ಎಸ್., ಸಾರ್ವಜನಿಕ ಸಂಪರ್ಕ ನಿರ್ದೇಶಕ ಎಸ್.ಪಿ.ಕಾರ್, ನವಯುಗ ಪ್ರೆಸ್‌ನ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.

ಈ ಕೃತಿಯಲ್ಲಿ ಡಾ.ಎನ್.ಉಡುಪ ಅವರು ದೇಶದ 25 ವಿವಿಗಳ ಕುಲಪತಿಗಳು ಹಾಗೂ ಮಾಜಿ ಕುಲಪತಿಗಳನ್ನು ಸಂದರ್ಶಿಸಿದ್ದಾರಲ್ಲದೇ, ವಿದ್ಯಾರ್ಥಿಗಳು, ಹೆತ್ತವರು, ಪ್ರಾಧ್ಯಾಪಕರ ಉಪಯುಕ್ತವಾಗುವಂತೆ ಹಲವು ಪ್ರಮುಖ ಮಾಹಿತಿಗಳನ್ನು ನೀಡಿದ್ದಾರೆ. ಅಲ್ಲದೇ ವಿಶ್ವದ ವಿವಿ ರ್ಯಾಂಕಿಂಗ್, ಅದರ ಮಾನದಂಡಗಳ ಕುರಿತಂತೆ ಸವಿಸ್ತಾರವಾಗಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News