ಬೆಂಗರೆಯಲ್ಲಿ ಗಾಲ್ಫ್ ಆಟದ ಮೈದಾನ ನಿರ್ಮಾಣ ಯೋಜನೆ ಕೈ ಬಿಡಲು ಲೀಗ್ ಮನವಿ

Update: 2020-11-10 11:56 GMT

ಮಂಗಳೂರು, ನ.10: ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಬೆಂಗರೆ ಪ್ರದೇಶದಲ್ಲಿ ಗಾಲ್ಫ್ ಆಟದ ಮೈದಾನ ನಿರ್ಮಿಸಲು ಮುಂದಾಗಿ ರುವುದನ್ನು ಕೈ ಬಿಡಬೇಕು ಎಂದು ಬೆಂಗರೆ ಪ್ರದೇಶ ಮುಸ್ಲಿಂ ಲೀಗ್ ನಿಯೋಗವು ರಾಜ್ಯ ಪ್ರವಾಸೋದ್ಯಮ ಸಚಿವರು ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗೆ ದ.ಕ.ಜಿಲ್ಲಾಧಿಕಾರಿಯ ಕಚೇರಿಯ ಮೂಲಕ ಮನವಿ ಸಲ್ಲಿಸಿದೆ.

ಗಾಲ್ಫ್ ಮೈದಾನ ನಿರ್ಮಾಣದ ಸುದ್ದಿ ತಿಳಿದು ಈ ಭಾಗದ ನಾಗರಿಕರು ತುಂಬಾ ಆತಂಕಕ್ಕೊಳಗಾಗಿದ್ದಾರೆ. ಈಗಾಗಲೆ ಇಲ್ಲಿನ ಜನರಿಗೆ ಯಾವುದೇ ಮೂಲಭೂತ ಸೌಕರ್ಯ ಸಿಕ್ಕಿಲ್ಲ. ಇಲ್ಲಿ ಸಾವಿರಾರು ಮನೆಗಳಿದ್ದು, ತುರ್ತು ಸಂದರ್ಭ ತಣ್ಣೀರುಬಾವಿ ಮೂಲಕ ವಾಹನದಲ್ಲಿ ಮಂಗಳೂರು ಪ್ರವೇಶಿಸುವ ಅನಿವಾರ್ಯತೆ ಇದೆ. ಗಾಲ್ಫ್ ಮೈದಾನ ನಿರ್ಮಿಸಿದರೆ ರಸ್ತೆ ತಡೆ ಉಂಟಾಗಿ ವಾಹನ ಸಂಚಾರಕ್ಕೂ ಅಡಚಣೆ ಯಾಗಬಹುದು. ಇಲ್ಲಿ ಸರಿಯಾದ ಶುದ್ಧ ಕುಡಿಯುವ ನೀರಿನ ಪೂರೈಕೆ ಇಲ್ಲ, ಸುವ್ಯವಸ್ಥಿತವಾದ ದಾರಿಯೂ ಇಲ್ಲ, ದಾರಿದೀಪವೂ ಇಲ್ಲ. ಮಲಿನ ನೀರು ಸಾಗಲು ಚರಂಡಿ ವ್ಯವಸ್ಥೆಯೂ ಇಲ್ಲ. ಹಲವು ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಇಲ್ಲ. ಪ್ರಾಥಮಿಕ ಚಿಕಿತ್ಸೆ ಕೇಂದ್ರ ಮತ್ತು ಹೆರಿಗೆ ಆಸ್ಪತ್ರೆಯೂ ಇಲ್ಲ. ಮಹಿಳಾ ಕಾಲೇಜು ಮತ್ತು ಕಾಲೇಜು ಸ್ಥಾಪನೆಯ ಬೇಡಿಕೆ ಇಟ್ಟರೂ ಸ್ಪಂದಿಸಿಲ್ಲ. ಸದ್ಯದ ಸ್ಥಿತಿಯಲ್ಲಿ ಇಲ್ಲಿ ಗಾಲ್ಫ್ ನಿರ್ಮಾ ಣದ ಅಗತ್ಯವಿಲ್ಲ. ಹಾಗಾಗಿ ಈ ಯೋಜನೆಯನ್ನು ಕೈ ಬಿಡಬೇಕು ಎಂದು ದ.ಕ. ಜಿಲ್ಲಾ ಮುಸ್ಲಿಂ ಲೀಗ್‌ನ ಕಾರ್ಯದರ್ಶಿ ಎಂ.ಕೆ. ಅಶ್ರಫ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News