ಮೀನುಗಾರಿಕೆ: ಕಿಶೋರ್‌ಗೆ ಡಾಕ್ಟರೇಟ್ ಗೌರವ

Update: 2020-11-12 16:08 GMT

ಮಂಗಳೂರು, ನ.12: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಜಲಪರಿಸರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರೊ.ಡಾ.ಎ.ಟಿ. ರಾಮಚಂದ್ರ ನಾಯ್ಕ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಕಿಶೋರ್ ಸಿ. ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.

‘ಸಿಹಿನೀರಿನ ಕೊಳಗಳಲ್ಲಿನ ಪ್ರಾಥಮಿಕ ಉತ್ಪಾದಕತೆಯ ಮೌಲ್ಯಮಾಪನ’ ವಿಷಯದಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ದೊರೆತಿದೆ. ಕಿಶೋರ್ ಸಿ. ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿನ ರೈತರ ತೋಟದಲ್ಲಿರುವ ಆಯ್ದ ಕೃಷಿ-ಕೊಳಗಳಲ್ಲಿ ಗೆಂಡೆಮೀನುಗಳ ಬೆಳವಣಿಗೆ, ಕೊಳದನೀರು ಮತ್ತು ಮಣ್ಣಿನ ಗುಣಮಟ್ಟ ಪರೀಕ್ಷೆ ಹಾಗೂ ಜಲ ಉತ್ಪಾದಕತೆಗಳ ಬಗ್ಗೆ 17 ತಿಂಗಳುಗಳ ದೀರ್ಘ ಅಧ್ಯಯನ ನಡೆಸಿದ್ದರು.

ಕಿಶೋರ್ ಶಿವಮೊಗ್ಗ ಮೂಲದ ಚಂದ್ರನಾಯ್ಕ ಮತ್ತು ವನಿತಾ ದಂಪತಿಯ ಪುತ್ರ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News