ಸ್ಕೂಟರ್ ಸುಲಿಗೆ: ದೂರು

Update: 2020-11-13 14:51 GMT

ಮಂಗಳೂರು, ನ.13: ಅಪರಿಚಿತ ವ್ಯಕ್ತಿಯೋರ್ವ ದೋಸೆ ತವಾ ಹಿಡಿದು ಅಡ್ಡಗಟ್ಟಿ  ಹಲ್ಲೆ ನಡೆಸಿ, ಜತೆಗಿದ್ದ ಪುತ್ರಿಯನ್ನು ದೂಡಿ ಹಾಕಿ ಸ್ಕೂಟರನ್ನು ಸುಲಿಗೆ ಮಾಡಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆಡ್ಡಿ ಡಾಯಸ್ ಅವರು ತನ್ನ ಪುತ್ರಿಯೊಂದಿಗೆ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿ ಹಿಂದಿರುಗುವ ವೇಳೆ ಬನ್ನಡ್ಕ ಎಂಬಲ್ಲಿ ತಲುಪಿದ್ದರು. ಅಪರಿಚಿತ ವ್ಯಕ್ತಿ ತವಾ ಹಿಡಿದು ಸ್ಕೂಟರ್ ಅಡ್ಡಗಟ್ಟಿದ್ದಾನೆ. ಆರೋಪಿ ಸ್ಕೂಟರ್ ಚಲಾಯಿಸಿಕೊಂಡು ಕಾರ್ಕಳದ ಕಡೆಗೆ ಹೋಗಿದ್ದಾನೆ ಎಂದವರು ಪೊಲೀಸರಿಗೆ ದೂರು ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News