ತಾಜುಲ್ ಉಲಮಾರ ವ್ಯಕ್ತಿತ್ವ, ಬೊಧನೆಗಳನ್ನು ನಾವು ಜೀವನದಲ್ಲಿ ಅಳವಡಿಸಿಬೇಕು : ರಶೀದ್ ಹಾಜಿ

Update: 2020-11-14 15:53 GMT

ಉಳ್ಳಾಲ : ಪವಾಡ ಪುರುಷರಿಗೆ ಅಪಾರ ಗೌರವ ಇದೆ, ಅದನ್ನು ನಾವು ಗಮನಿಸಬೇಕು. ತಾಜುಲ್ ಉಲಮಾ ಅವರು ಸಯ್ಯಿದ್ ಮದನಿ ತಂಙಳ್ ರ ನಿರ್ದೇಶನದ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದರು. ನಾವು ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಗೊಂದಲ ಮಾಡದೇ ಪ್ರವಾದಿ ಮುಹಮ್ಮದ್ (ಸ.ಅ) ಹಾಗೂ ಧಾರ್ಮಿಕ ಪಂಡಿತರ ನಿರ್ದೇಶನ ಅನುಸರಿಸಿ ಜೀವಿಸಬೇಕು ಎಂದು ಸಯ್ಯದ್ ಫಝಲ್ ಪೂಕೋಯ ತಂಙಳ್  ಹೇಳಿದರು.

ಅವರು ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯದ್ ಮದನಿ ದರ್ಗಾ ಸಮಿತಿ ಇದರ ಆಶ್ರಯದಲ್ಲಿ ವಲೀಯುಲ್ಲಾಹಿ ಮೊಯ್ದಿನ್ ಬಾವ ಹಾಗೂ ತಾಜುಲ್ ಉಲಮಾ ಹೆಸರಿನಲ್ಲಿ ವರ್ಷ ಪ್ರತಿ ನಡೆಯುವ ಆಂಡ್ ನೇರ್ಚೆಯ ನೇತೃತ್ವ ವಹಿಸಿ ಮಾತನಾಡಿದರು.

ಅತಿಥಿಗಳನ್ನು ಸ್ವಾಗತಿಸಿದ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅವರು, ತಾಜುಲ್ ಉಲಮಾ ಅವರ ವ್ಯಕ್ತಿತ್ವ, ಬೊಧನೆಗಳನ್ನು ನಾವು ಜೀವನದಲ್ಲಿ ಅಳವಡಿಸಿ ಕೊಂಡು ಬರಬೇಕು ಎಂದು ಕರೆ ನೀಡಿದರು.

ಸಯ್ಯಿದ್ ಮದನಿ ದರ್ಗಾ ಝಿಯಾರತ್, ಮೌಲೂದ್ ಪಾರಾಯಣ ನಡೆಯಿತು. ಈ ಸಂದರ್ಭದಲ್ಲಿ ಕೇಂದ್ರ ಜುಮಾ ಮಸೀದಿ ಖತೀಬ್ ಅನ್ವರ್ ಅಲಿ ದಾರಿಮಿ, ಅರೆಬಿಕ್ ಕಾಲೇಜು ಪ್ರೊ. ಇಬ್ರಾಹಿಂ ಮದನಿ, ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಬಾವಾ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹಾ ಮುಹಮ್ಮದ್, ಜೊತೆ ಕಾರ್ಯದರ್ಶಿ ನೌಷಾದ್ ಅಲಿ, ಆಝಾದ್ ಇಸ್ಮಾಯಿಲ್, ಅರೆಬಿಕ್ ಟ್ರಸ್ಟ್ ನ ಜೊತೆ ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ, ಚಾರಿಟೇಬಲ್ ಟ್ರಸ್ಟ್ ಜತೆ ಕಾರ್ಯದರ್ಶಿ ಹಾಜಿ ಎ.ಕೆ ಮೊಹಿಯದ್ದೀನ್, ಸದಸ್ಯ ರಾದ ಹಮ್ಮಬ್ಬ ಕೋಟೆಪುರ, ಮಯ್ಯದ್ದಿ ಕೋಡಿ, ಮೊಯ್ದಿನ್ ಹಾಜಿ ಪೇಟೆ, ಇಬ್ರಾಹಿಂ ಹಾಜಿ ಉಳ್ಳಾಲ ಬೈಲ್, ಮೊಯ್ದಿನಬ್ಬ ಉಳ್ಳಾಲ ಬೈಲ್, ಹಸನಬ್ಬ ಕೈಕೊ, ಹನೀಫ್ ಮಾರ್ಗತಲೆ, ಖಾಸಿಂ ಕೋಡಿ, ಅಬೂಬಕ್ಕರ್ ಅಲಿ ನಗರ, ಲತೀಫ್ ಚೆರೆಮೋನು, ನಝೀರ್ ಸುಂದರಿ ಬಾಗ್ , ಹಮೀದ್ ಕೋಡಿ, ಜಮಾಲ್ ಮೇಲಂಗಡಿ, ಮುಫತ್ತಿಸ್ ಹನೀಫ್ ಸಖಾಫಿ ದರ್ಗಾ ಅಧೀನ ಮೊಹಲ್ಲಾ ಮಸೀದಿಗಳ ಇಮಾಮರುಗಳು, ಖತೀಬರುಗಳು, ಅಧ್ಯಕ್ಷರುಗಳು, ಸಮಿತಿ ಸದಸ್ಯರುಗಳು ಮೊದಲಾದವರು ಉಪಸ್ಥಿತರಿದ್ದರು.

ಸಲಾಂ ಮದನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News