ಘನತ್ಯಾಜ್ಯ ನಿರ್ವಹಣೆಯಲ್ಲಿ ಕಳಪೆ ಸಾಧನೆ: ವಾರ್ಡ್ ಗುತ್ತಿಗೆದಾರರಿಗೆ ಪಾಲಿಕೆಯಿಂದ ನೋಟಿಸ್‍ಗೆ ಚಿಂತನೆ

Update: 2020-11-14 13:28 GMT

ಬೆಂಗಳೂರು, ನ.14: ಘನತ್ಯಾಜ್ಯ ನಿರ್ವಹಣೆ ಮಾಡುವ ನಿಟ್ಟಿನಲ್ಲಿ 198 ವಾರ್ಡ್‍ಗಳಿಗೆ ರ‍್ಯಾಂಕಿಂಗ್ ನೀಡಲಾಗುತ್ತಿದ್ದು, ಅದರಲ್ಲಿ ಕಳಪೆ ಸಾಧನೆ ತೋರಿದ ವಾರ್ಡ್ ಗುತ್ತಿಗೆದಾರರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

ರಾಜಧಾನಿಯಲ್ಲಿ ಎಂಟು ವಲಯಗಳ 198 ವಾರ್ಡ್‍ಗಳಿಂದ ಪ್ರತಿನಿತ್ಯ 3,600 ರಿಂದ 4 ಸಾವಿರ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಸೆಪ್ಟೆಂಬರ್ ನಲ್ಲಿ ಪ್ರತಿನಿತ್ಯ ಸರಾಸರಿ 865 ಟನ್ ಮಿಶ್ರ ಕಸ ಉತ್ಪಾದನೆಯಾಗಿದೆ. ಅದನ್ನು ಮೀಟಗಾನಹಳ್ಳಿ ಭೂಭರ್ತಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಎಂಎಸ್‍ಜಿಪಿ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತಿದೆ. ಅದರಲ್ಲಿ ಶೇ.23 ಮಾತ್ರ ಹಸಿ ತ್ಯಾಜ್ಯ ಸಂಗ್ರಹಣೆಯಾಗುತ್ತಿದ್ದು, ಮಿಶ್ರ ಕಸವೇ ಹೆಚ್ಚಾಗುತ್ತಿದೆ.

ತ್ಯಾಜ್ಯ ವಿಂಗಡಣೆ ಸೆಪ್ಟೆಂಬರ್ ವರದಿಯಲ್ಲಿ ಎಚ್‍ಎಸ್‍ಆರ್ ನಗರ ವಾರ್ಡ್ ಪ್ರಥಮ ರ‍್ಯಾಂಕ್ ಪಡೆದುಕೊಂಡಿದೆ. ಕಾಡು ಮಲ್ಲೇಶ್ವರ, ನಾಗಪುರ, ಹೊಂಗಸಂದ್ರ, ಬೊಮ್ಮನಹಳ್ಳಿ ಹಾಗೂ ಮಂಗಮ್ಮನ ಪಾಳ್ಯ ಕ್ರಮವಾಗಿ 2 ರಿಂದ 6 ರವರೆಗಿನ ರ‍್ಯಾಂಕ್ ಪಡೆದುಕೊಂಡಿದೆ.

ಪಾದರಾಯನಪುರ, ದೇವಸಂದ್ರ, ರಾಯಪುರ, ನೀಲಸಂದ್ರ, ಜೆ.ಜೆ.ನಗರ, ಜಯನಗರ, ಎಸ್.ಕೆ.ಗಾರ್ಡನ್, ಶಿವಾಜಿನಗರ, ಸಿದ್ದಾಪುರ, ಹೊನ್ನೂರ ಪೇಟೆ, ವಿಶ್ವೇಶ್ವರಪುರ ಮುಂತಾದ ವಾರ್ಡ್‍ಗಳಲ್ಲಿ ತ್ಯಾಜ್ಯ ವಿಂಗಡಣೆಯಲ್ಲಿ ಶೂನ್ಯ ಸಾಧನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News