ಲಯನ್ಸ್ ಕ್ಲಬ್ ಮಂಗಳೂರು -‘ಕನ್ನಡ ಡಿಂಡಿಮ’ ರಾಜ್ಯೋತ್ಸವ ಸಂಭ್ರಮ

Update: 2020-11-14 15:15 GMT

ಮಂಗಳೂರು, ನ.14: ಕನ್ನಡ ರಾಜ್ಯೋತ್ಸವದ ಆಚರಣೆ ಒಂದು ದಿನ ಅಥವಾ ನವೆಂಬರ್ ಮಾಸಾಂತ್ಯವರೆಗೆ ಮಾತ್ರ ಸೀಮಿತವಲ್ಲ. ಅದು ನಿತ್ಯೋತ್ಸವವಾಗಬೇಕು. ನಾಡಿನ ಸಂಸ್ಕೃತಿ - ಪರಂಪರೆಗೆ ಬೆಳಕು ತೋರುವ ಆಚರಣೆಯಾಗಬೇಕು. ಕರ್ನಾಟಕದ ಗತ ಇತಿಹಾಸ,ಕಲೆ - ಸಾಹಿತ್ಯ ಹಾಗೂ ಜನಜೀವನ ಬೆಳೆದುಬಂದ ಬಗೆಯನ್ನು ಎಳೆಯ ತಲೆಮಾರಿಗೆ ತಿಳಿಹೇಳುವ ಕಾರ್ಯಕ್ರಮಗಳು ವಿವಿಧ ಸಂಘಟನೆಗಳ ಮೂಲಕ ನಡೆಯಬೇಕು ಎಂದು ಸಾಹಿತಿ - ಸಂಘಟಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಲಯನ್ಸ್ ಕ್ಲಬ್ ಮಂಗಳೂರು ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ಏರ್ಪಡಿಸಿದ್ದ ‘ಕನ್ನಡ ಡಿಂಡಿಮ’ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ನಟ ವಸಂತ ವಿ.ಅಮೀನ್ ಮತ್ತು ಉದಯೋನ್ಮುಖ ಕವಿ ರವೀಂದ್ರ ನಾಯಕ್ ಸಣ್ಣಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಮಂಗಳೂರು ಜಿಲ್ಲೆ ಅಧ್ಯಕ್ಷ ಕರ್ನಿರೆ ಕೃಷ್ಣಾನಂದ ಪೈ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕ್ಲಬ್ಬಿನ ಕಾರ್ಯದರ್ಶಿ ಪ್ರಶಾಂತ ಭಟ್ ಕಡಬ ಸ್ವಾಗತಿಸಿದರು. ಸದಸ್ಯೆ ಅರ್ಚನಾ ಕಾಮತ್ ನಾಡಗೀತೆ ಹಾಡಿದರು. ಕಾರ್ಯಕ್ರಮ ಸಂಯೋಜಕ ಯೋಗೇಶ್ ಕುಮಾರ್ ಜೆಪ್ಪುಅತಿಥಿಗಳನ್ನು ಪರಿಚಯಿಸಿದರು. ಕೋಶಾಧಿಕಾರಿ ಸುಧಾಕರ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News