ಕಾರ್ನಾಡು: ಎಸ್.ಡಿ.ಪಿ.ಐ.ಯಿಂದ ಉಚಿತ ಮಾಹಿತಿ ಮತ್ತು ಸೇವಾ ಕೇಂದ್ರ ಉದ್ಘಾಟನೆ

Update: 2020-11-15 10:23 GMT

ಮುಲ್ಕಿ, ನ.15: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ.), ಮುಲ್ಕಿ ವಲಯದ ಅಧೀನದಲ್ಲಿ ಕಾರ್ನಾಡುವಿನ ನಾಲೂರು ಕಾಂಪ್ಲೆಕ್ಸ್ ತೆರೆಯಲಾದ ಉಚಿತ ಮಾಹಿತಿ ಮತ್ತು ಸೇವಾ ಕೇಂದ್ರ ರವಿವಾರ ಉದ್ಘಾಟನೆಗೊಂಡಿತು.

ಕಿಲ್ಪಾಡಿ ಬೆಥನಿ ಪಿಯು ಕಾಲೇಜಿನ ಪ್ರಾಂಶುಪಾಲೆ ಭಗಿನಿ ಎಸ್.ಆರ್.ಮಾರಿಲೋ ಜಿ.ಎಸ್. ನೂತನ ಕೇಂದ್ರವನ್ನು ಉದ್ಘಾಟಿಸಿದರು.

ಎಸ್.ಡಿ.ಪಿ.ಐ. ಮುಲ್ಕಿ ಮೂಡುಬಿದಿರೆ  ಕ್ಷೇತ್ರ ಅಧ್ಯಕ್ಷ ಆಸೀಫ್ ಕೋಟೆಬಾಗಿಲು ಅಧ್ಯಕ್ಷತೆ ವಹಿಸಿದ್ದರು. ಕಾರ್ನಾಡು  ಮಸ್ಜಿದುನ್ನೂರು ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ದಾರಿಮಿ ದುಆಗೈದರು. ಅಶೋಕ್ ಕುಮಾರ್ ಶೆಟ್ಟಿ ಮಾಹಿತಿ ಕೇಂದ್ರದ ಕಂಪ್ಯೂಟರ್ ಗೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಲಿಯಾಕತ್ ಅಲಿ, ಭಗಿನಿ ನಂದಿತಾ ಬಿ.ಎಸ್., ಶರೀಫ್ ಕೊಲ್ನಾಡು ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News