ದ.ಕ.ಜಿಲ್ಲೆ : ಕೊರೋನ ಪಾಸಿಟಿವ್, ಸಾವಿನ ಪ್ರಮಾಣದಲ್ಲಿ ಇಳಿಮುಖ

Update: 2020-11-15 14:42 GMT

ಮಂಗಳೂರು, ನ.15: ದ.ಕ.ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಮತ್ತು ಸಾವಿನ ಪ್ರಮಾಣದಲ್ಲಿ ಇಳಿಮುಖ ಕಂಡು ಬಂದಿದ್ದು, ದೀಪಾವಳಿಯ ಖುಶಿಯ ಮಧ್ಯೆ ಈ ಪ್ರಮಾಣ ಜನತೆಗೆ ತುಸು ನೆಮ್ಮದಿಯನ್ನು ನೀಡಿದೆ.

ರವಿವಾರ ಕೋವಿಡ್ ಸೋಂಕಿತರ ಸಂಖ್ಯೆ 34 ಮತ್ತು ಮೃತಪಟ್ಟವರ ಸಂಖ್ಯೆ 2ಕ್ಕೆ ಇಳಿದಿದೆ. ಕಳೆದ ಹಲವು ದಿನಗಳಿಂದ ಈ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದ್ದು, ಮಳೆಗಾಲ ದೂರವಾಗುತ್ತಲೇ ಸೋಂಕಿತರ ಮತ್ತು ಮೃತಪಟ್ಟವರ ಸಂಖ್ಯೆ ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಈವರೆಗೆ 3,00,808 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ಆ ಪೈಕಿ 2,69,549 ಮಂದಿಯ ವರದಿ ನೆಗೆಟಿವ್ ಮತ್ತು 31,259 ಮಂದಿಯ ವರದಿ ಪಾಸಿಟಿವ್ ಬಂದಿದೆ. ಅಲ್ಲದೆ ಶನಿವಾರ 86 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಈವರೆಗೆ ಗುಣಮುಖರಾದವರ ಸಂಖ್ಯೆ 29,800ಕ್ಕೇರಿದೆ. ಅಲ್ಲದೆ ಮೃತಪಟ್ಟವರ ಸಂಖ್ಯೆ 693ಕ್ಕೇರಿದೆ. ರವಿವಾರದವರೆಗೆ ಜಿಲ್ಲೆಯಲ್ಲಿ 766 ಸಕ್ರಿಯ ಪ್ರಕರಣಗಳಿವೆ.

ಮಾಸ್ಕ್ ಧರಿಸದೆ ಕೋವಿಡ್ -19 ನಿಯಮ ಉಲ್ಲಂಘಿಸಿದ ಘಟನೆಗೆ ಸಂಬಂಧಿಸಿ ಈವರೆಗೆ 12,971 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ 14,05,632 ರೂ.ವನ್ನು ಸಂಗ್ರಹಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News