ಸರ ಸೆಳೆದು ಪರಾರಿ
Update: 2020-11-17 16:05 GMT
ಮಲ್ಪೆ, ನ.17: ಕಿದಿಯೂರು ಗ್ರಾಮದ ಪಡುಕೆರೆ ಕಿದಿಯೂರು ನಿವಾಸಿ ಯಮುನಾ (65) ಎಂಬವರು ಮೀನು ಮಾರಾಟ ಮಾಡುವುದಕ್ಕಾಗಿ ಇಂದು ಮುಂಜಾನೆ 4:45ರ ಸುಮಾರಿಗೆ ಮನೆಯಿಂದ ಪಡುಕೆರೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಯಾರೋ ಅಪರಿಚಿತ ವ್ಯಕತಿ ಸ್ಕೂಟರ್‌ನಲ್ಲಿ ಹಿಂದಿನಿಂದ ಬಂದು ಕುತ್ತಿಗೆಗೆ ಕೈಹಾಕಿ, ಅವರನ್ನು ದೂಡಿ ಹಾಕಿ ಚಿನ್ನದ ಸರವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.
ಯಮುನಾ ಅವರು ಹಠಾತ್ತನೆ ನಡೆದ ಘಟನೆಯ ಹೊರತಾಗಿಯೂ ಸರವನ್ನು ಕೈಯಲ್ಲಿ ಹಿಡಿದು ಹೋರಾಟ ನಡೆಸಿದರೂ, ಆರೋಪಿ ಅವರನ್ನು ದೂಡಿಹಾಕಿ ಸರದೊಂದಿಗೆ ಮಲ್ಪೆಯತ್ತ ದೌಡಾಯಿಸಿದ್ದಾನೆ. ಐದೂವರೆ ಪವನ್ ತೂಕದ ಚಿನ್ನದ ಸರದ ವೌಲ್ಯ 1.95 ಲಕ್ಷ ರೂ.ಎಂದು ಅಂದಾಜಿ ಸಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.