ಮಂಗಳೂರು: ಪಾಲಿಕೆ ಉಪ ಆಯುಕ್ತರ ಹೆಸರಲ್ಲಿ ನಕಲಿ ಫೇಸ್ಬುಕ್ ಐಡಿ; ದೂರು ದಾಖಲು

Update: 2020-11-18 08:08 GMT

ಮಂಗಳೂರು, ನ. 18: ಮಹಾನಗರ ಪಾಲಿಕೆಯ ಉಪ ಆಯುಕ್ತ ಡಾ. ಸಂತೋಷ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಐಡಿ ರಚಿಸಿ, ಆಪ್ತರಿಂದ ಹಣ ಲಪಟಾಯಿಸುವ ಪ್ರಕರಣಕ್ಕೆ ಸಂಬಂಧಿಸಿ ಸೈಬ್ ಕ್ರೈಂನಡಿ ಪ್ರಕರಣ ದಾಖಲಿಸಲಾಗಿದೆ.

ಡಾ. ಸಂತೋಷ್ ಕುಮಾರ್ ಹೆಸರಿನಲ್ಲಿ, ಅವರ ಫೇಸ್ಬುಕ್‌ನ ಒರಿಜಿನಲ್ ಐಡಿಯ ಫೋಟೋ ಮತ್ತು ಹೆಸರು, ಹುದ್ದೆ ಬಳಸಿಕೊಂಡು ಮತ್ತೊಂದು ಐಡಿ ರಚಿಸಿ, ಅವರ ಆಪ್ತರ ಪಟ್ಟಿಯಲ್ಲಿ ಕೆಲವರಿಂದ ಹಣದ ಅಗತ್ಯವನ್ನು ಕೋರಿ ಹಣ ಲಪಟಾಯಿಸುತ್ತಿರುವುದಾಗಿ ದೂರು ದಾಖಲಿಸಲಾಗಿದೆ.

ಸ್ನೇಹಿತರ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ ನಕಲಿ ವ್ಯಕ್ತಿ ಸೃಷ್ಟಿಸಿರುವ ದುಷ್ಕರ್ಮಿಗಳು ಹಲವರಿಂದ ಹಣ ಲಪಟಾಯಿಸಿರುವ ಕುರಿತು ಮಾಹಿತಿಯ ಹಿನ್ನೆಲೆಯಲ್ಲಿ ಡಾ. ಸಂತೋಷ್ ಕುಮಾರ್ ಈ ಬಗ್ಗೆ ತಮ್ಮ ಫೇಸ್ಬುಕ್ ಅಕೌಂಟ್‌ನಲ್ಲಿ ಈ ಬಗ್ಗೆ ಜಾಗೃತಿಯನ್ನೂ ನೀಡಿದ್ದಾರೆ.

ಅನಾಮಧೇಯ ವ್ಯಕ್ತಿ ತಮ್ಮ ಹೆಸರಿನ ಫೇಸ್ಬುಕ್ ಅಕೌಂಟ್ ರಚಿಸಿ ಅದರಿಂದ ಹಣಕ್ಕಾಗಿ ಬೇಡಿಕೆ ಇಡುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಯಾರೂ, ತಮ್ಮ ಹೆಸರಿನಲ್ಲಿ ಸಂಶಯಾಸ್ಪದ ಮೇಲ್, ಕರೆ ಅಥವಾ ಫ್ರೆಂಡ್ಸ್ ರಿಕ್ವೆಸ್ಟ್ ಬಂದರೆ ಸ್ವೀಕರಿಸದಂತೆ, ಸ್ಪಂದಿಸದಂತೆ ಅವರು ತಮ್ಮ ಖಾತೆಯ ಮೂಲಕ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News