ಮಲಾರ್ ಹೆಲ್ಪ್ ಲೈನ್ ನಿಂದ ಪ್ರವಾದಿ ಜೀವನ ಸಂದೇಶ
Update: 2020-11-19 15:25 GMT
ಮಂಗಳೂರು, ನ.19: ಮಲಾರ್ ಹೆಲ್ಪ್ ಲೈನ್ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ರವರ ಜೀವನ ಸಂದೇಶ ಕಾರ್ಯಕ್ರಮವು ಮಲಾರ್ ಅಕ್ಷರ ನಗರದಲ್ಲಿ ನಡೆಯಿತು.
ಮಲಾರ್ ಹೆಲ್ಪ್ ಲೈನ್ ಅಧ್ಯಕ್ಷ ಶಮೀರ್ ಟಿಪ್ಪುನಗರ ಅಧ್ಯಕ್ಷತೆ ವಹಿಸಿದ್ದರು. ಅಲ್ ಮುಬಾರಕ್ ಜುಮಾ ಮಸೀದಿಯ ಖತೀಬ್ ಇಬ್ರಾಹಿಂ ಬಾದುಷ ಇರ್ಫಾನಿ ಪ್ರವಾದಿ ಜೀವನದ ಬಗ್ಗೆ ಮುಖ್ಯ ಭಾಷಣಗೈದರು. ಮಂಜನಾಡಿಯ ಅಲ್ ಮದೀನಾ ಮರ್ಝೂಖಿ ಇಖ್ವಾನ್‌ನ ಪ್ರಧಾನ ಕಾರ್ಯದರ್ಶಿ ನೌಫಲ್ ಮರ್ಝೂಖಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಮಲಾರ್ ಹೆಲ್ಪ್ ಲೈನ್ ಸಂಚಾಲಕ ಕಬೀರ್ ಮಲಾರ್, ಕೋಶಾಧಿಕಾರಿ ರಿಝ್ವನ್ ಅರಸ್ತಾನ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಎಂಕೆ. ಫಾರೂಕ್ ಕಾರ್ಯಕ್ರಮ ನಿರೂಪಿಸಿ ದರು.