ಅನುಮತಿ ಇಲ್ಲದೆ ಜಾಥ: ಸಿಎಫ್‌ಐ ಸದಸ್ಯರ ವಿರುದ್ಧ ಪ್ರಕರಣ
Update: 2020-11-22 15:46 GMT
ಮಣಿಪಾಲ, ನ.22: ಪೂರ್ವಾನುಮತಿ ಪಡೆಯದೆ ಮಣಿಪಾಲದಲ್ಲಿ ನ.21ರಂದು ಪ್ರತಿಭಟನಾ ಜಾಥ ನಡೆಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸದಸ್ಯರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿ ಸರಕಾರದ ಕ್ರಮ ವಿರುದ್ಧ ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಸೇರಿದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಕಾಯಿನ್ ಸರ್ಕಲ್ ಬಳಿ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ ಜಾಥ ನಡೆಸಲು ಮುಂದಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವಿಚಾರವನ್ನು ಸಂಘಟನೆಯ ಸದಸ್ಯರಿಗೆ ಮನವರಿಕೆ ಮಾಡಿದ್ದು, ಸಂಘಟನೆಯ ಸದಸ್ಯರಾದ ಉಸಾಮ, ಸಫ್ವಾನ್, ಮಸೂದ್, ರಿಯಾಝ್ ವಿಟ್ಲ ಪೊಲೀಸ್ ಅಧಿಕಾರಿಯವರ ಮೌಖಿಕ ಆದೇಶವನ್ನು ಉಲ್ಲಂಘಿಸಿ ಜಾಥ ನಡೆಸಿರುವುದಾಗಿ ದೂರಲಾಗಿದೆ.