ಮಂಗಳೂರು ವಿವಿ ಪರೀಕ್ಷೆ, ಫಲಿತಾಂಶ ಪ್ರಕ್ರಿಯೆ ಗುತ್ತಿಗೆ ವ್ಯವಸ್ಥೆ ಸ್ಥಗಿತ: ಡಾ. ಪಿ.ಎಲ್.ಧರ್ಮ

Update: 2020-11-24 12:35 GMT

ಮಂಗಳೂರು, ನ.24: ಮುಂದಿನ ಶೈಕ್ಷಣಿಕ ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆ, ಫಲಿತಾಂಶಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮಂಗಳೂರು ವಿ.ವಿ ಪರೀಕ್ಷಾಂಗ ಕುಲಸಚಿವ ಡಾ. ಪಿ.ಎಲ್.ಧರ್ಮ ತಿಳಿಸಿದ್ದಾರೆ.

ಮಂಗಳವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಲ್ಲಿ ನಡೆದ ಒಪ್ಪಂದದಂತೆ ವಿ.ವಿಗೆ ಸಂಬಂಧಿಸಿ ಪರೀಕ್ಷಾ ಫಲಿತಾಂಶಗಳ ನಿರ್ವಹಣೆ ಬೆಂಗಳೂರಿನ ಸಾಫ್ಟ್‌ವೇರ್ ಸಂಸ್ಥೆಯೊಂದು ಮಾಡುತ್ತಿತ್ತು. ಫಲಿತಾಂಶವನ್ನು ಕ್ರೋಢೀಕರಿಸಿ ಪ್ರಕಟಿಸುವುದು ಸೇರಿದಂತೆ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಕಂಪೆನಿಯ ತಂತ್ರಜ್ಞರು ನಿಭಾಯಿಸುತ್ತಿದ್ದರು. ಮುಂದಿನ ವರ್ಷದಲ್ಲಿ ವಿ.ವಿಯೇ ಈ ಜವಾಬ್ದಾರಿಗಳನ್ನು ನಿರ್ವಹಿಸಲಿದೆ ಎಂದು ತಿಳಿಸಿದರು.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಫಲಿತಾಂಶ ಪ್ರಕಟ ಸಂದರ್ಭ ಈ ಬಾರಿ ಲೋಪಗಳು ತೀರಾ ಕಡಿಮೆಯಾಗಿವೆ. ಆದರೂ ಇಬ್ಬರು ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಉಂಟಾಗಿದ್ದ ಗೊಂದಲವನ್ನು ಗಂಭೀರವಾಗಿ ಪರಿಗಣಿಸಿ ಕುಲಪತಿಯವರು ಕಂಪೆನಿಗೆ ನೋಟೀಸು ನೀಡಿ ಸ್ಪಷ್ಟೀಕರಣ ಕೇಳಿದ್ದಾರೆ. ಸಾಫ್ಟ್‌ವೇರ್‌ನಲ್ಲಿ ಉಂಟಾದ ದೋಷದಿಂದಾಗಿ ಫಲಿತಾಂಶದಲ್ಲಿ ಪ್ರಮಾದ ಆಗಿರುವುದನ್ನು ಏಜೆನ್ಸಿ ಪಡೆದಿರುವ ಕಂಪೆನಿ ಒಪ್ಪಿಕೊಂಡಿದೆ ಎಂದು ಕುಲಸಚಿವರು ತಿಳಿಸಿದರು.

ಕೊರೋನ ಸವಾಲಿನ ನಡುವೆಯೂ ಮಂಗಳೂರು ವಿ.ವಿ ತನ್ನ ವ್ಯಾಪ್ತಿಯಲ್ಲಿ ಬರುವ 210 ಕಾಲೇಜುಗಳ ಪೈಕಿ 205 ಕಾಲೇಜುಗಳ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಪರೀಕ್ಷೆಗಳನ್ನು ಆಯೋಜಿಸಿದೆ. ಹಲವಾರು ಕೋರ್ಸ್‌ಗಳ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು ಬಾಕಿ ಇರುವ ಕೋರ್ಸ್‌ಗಳ ಫಲಿತಾಂಶವನ್ನು ಶೀಘ್ರದಲ್ಲೇ ಹಂತ ಹಂತವಾಗಿ ಪ್ರಕಟಿಸಲಾಗುವುದು. ದೇಶ, ವಿದೇಶದ 250 ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆದು ವಿದ್ಯಾರ್ಥಿಗಳು ಸ್ಥಳೀಯವಾಗಿಯೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಡಲಾಗಿತ್ತು. ಒಟ್ಟು 40,942 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಫಿಜಿ, ಲಕ್ಷದ್ವೀಪ, ಮಣಿಪುರ, ಧಾರವಾಡ, ಜಮ್ಮು-ಕಾಶ್ಮೀರದಲ್ಲಿಯೂ ಅಲ್ಲಿನ ವಿ.ವಿಗಳ ಸಹಕಾರದಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು ಎಂದು ಅವರು ವಿವರಿಸಿದರು.

ಫಲಿತಾಂಶದಲ್ಲಿ ಯಾವುದೇ ರೀತಿಯ ಗೊಂದಲಗಳಿದ್ದರೆ ಅದನ್ನು ಪರಿಹರಿಸುವುದಕ್ಕಾಗಿ ವಿಶ್ವವಿದ್ಯಾನಿಲಯವರು ಹೆಲ್ಪ್‌ಡೆಸ್ಕ್‌ನ್ನು ಆರಂಭಿಸಿ ಅದರ ಮೂಲಕ ತ್ವರಿತವಾಗಿ ಸೇವೆ ಒದಗಿಸುತ್ತಿದೆ. ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಕುಲಸಚಿವರು ತಿಳಿಸಿದರು.

ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಡೆದ ಪದವಿ ಪರೀಕ್ಷೆಗಳ ವೌಲ್ಯಮಾಪನ ಶೇ.80ರಷ್ಟು ಮುಕ್ತಾಯಗೊಂಡಿದೆ. ಬಿಬಿಎ,ಬಿಸಿಎ, ಬಿಎಚ್‌ಎಸ್ ಕೋರ್ಸ್‌ಗಳ ಲಿತಾಂಶವನ್ನು ನ.15ರಂದು, ಬಿ.ಎ, ಬಿಎಸ್ಸಿ ಲಿತಾಂಶವನ್ನು ನ.16ರಂದು ಬಿಕಾಂ ನ.17ರಂದು, ಬಿಬಿಎಂ, ಬಿಎಸ್‌ಡಬ್ಲ್ಯೂ ಲಿತಾಂಶವನ್ನು ನ.19ರಂದು ವಿವಿಯ ಅಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಬಿಎಸ್ಸಿ (ಎ್ಎನ್‌ಡಿ), ಬಿಎಚ್‌ಎಂ, ಬಿಎಸ್‌ಪಿ (ಎ್ಡಿ/ಐಡಿ), ಬಿಎಎಸ್‌ಎಲ್‌ಪಿ, ಬಿಎ (ಎಚ್‌ಆರ್‌ಡಿ) ಕೋರ್ಸ್‌ಗಳ ಲಿತಾಂಶವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದರು.

ಮರು ವೌಲ್ಯಮಾಪನ/ಉತ್ತರ ಪತ್ರಿಕೆಗಳ ವೈಯಕ್ತಿಕ ವೀಕ್ಷಣೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳು ಡಿ.2ರ ಒಳಗೆ ಫಲಿತಾಂಶದ ವೆಬ್‌ಸೈಟ್ (ಪ್ರಾಂಶುಪಾಲರಿಂದ ದೃಢೀಕೃತ) ಪ್ರತಿಯೊಂದಿಗೆ ಕಾಲೇಜು ಮೂಲಕ ಅರ್ಜಿ ಸಲ್ಲಿಸಬಹುದು. ಸ್ನಾತಕೋತ್ತರ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲಿತಾಂಶದ ಪ್ರತಿಯನ್ನು ಪ್ರಾಂಶುಪಾಲರಿಂದ ದೃಢೀಕರಿಸಿ ಅರ್ಜಿ ಸಲ್ಲಿಸಬಹುದು ಎಂದು ಡಾ. ಧರ್ಮ ತಿಳಿಸಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತು ಯುಜಿಸಿ ಮಾರ್ಗಸೂಚಿಯಂತೆ ಆತಂಕದ ನಡುವೆಯೂ ಅಂತಿಮ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಯಾವುದೇ ಗೊಂದಲ ಇಲ್ಲದೆ ಲಿತಾಂಶ ಪ್ರಕಟಿಸಲಾಗುತ್ತಿದೆ. ಪದವಿ ಮಟ್ಟದಲ್ಲಿ ಪ್ರಸ್ತುತ ಮೂರು ಮತ್ತು ಐದನೇ ಹಾಗೂ ಏಳನೇ ಸೆಮಿಸ್ಟರ್‌ಗಳಲ್ಲಿ (ಬಿಎಚ್‌ಎಂ) ವ್ಯಾಸಂಗ ಮಾಡುತ್ತಿರುವ ಇಂಟರ್‌ಮಿಡೀಯೇಟ್ ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ, ತೃತೀಯ ಮತ್ತು ಐದನೇ (ಬಿಎಚ್‌ಎಂ) ಸೆಮಿಸ್ಟರ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರೆ, ಅಂತಹ ವಿದ್ಯಾರ್ಥಿಗಳ ಲಿತಾಂಶವನ್ನು ಯುಜಿಸಿ ಮತ್ತು ಸರಕಾರದ ನಿರ್ದೇಶನದಂತೆ ಈ ವಿದ್ಯಾರ್ಥಿಗಳ ಹಿಂದಿನ ಸೆಮಿಸ್ಟರ್ ಅಂಕಗಳ ಶೇ.50 ಮತ್ತು ಪ್ರಸ್ತುತ ಸೆಮಿಸ್ಟರ್‌ನ ಆಂತರಿಕ ಅಂಕಗಳ ಶೇ.50ನ್ನು ಉನ್ನತೀಕರಿಸಿ ಎರಡು, ನಾಲ್ಕು, ಆರನೇ ಸೆಮಿಸ್ಟರ್ ಲಿತಾಂಶ ನೀಡಲಾಗಿದೆ. ಸ್ನಾತಕೋತ್ತರ ಪದವಿಯ ಇಂಟರ್‌ಮಿಡಿಯೇಟ್ ವಿದ್ಯಾರ್ಥಿಗಳ ಲಿತಾಂಶವನ್ನೂ ಇದೇ ರೀತಿಯಲ್ಲಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಾ.ಪಿ.ಎಲ್. ಧರ್ಮ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದೂರಶಿಕ್ಷಣ ಕೇಂದ್ರದ ನಿರ್ದೇಶಕ ಪ್ರೊ.ಸಂಗಪ್ಪ, ಸಹಾಯಕ ಕುಲಸಚಿವ ಯಶೋಧಾ, ವಿಶೇಷಾಧಿಕಾರಿ ಡಾ. ರಮೇಶ್, ತಾಂತ್ರಿಕ ಸಮಿತಿಯ ಸದಸ್ಯ ಡಾ. ರವಿ ಉಪಸ್ಥಿತರಿದ್ದರು.

ಸೆ. 16ರಿಂದ ಅ.19ರವರೆಗೆ ನಡೆದ ಮಂಗಳೂರು ವಿವಿಯ 2019-20ನೇ ಸಾಲಿನ ಅಂತಿಮ ವರ್ಷ ಮತ್ತು ಸೆಮಿಸ್ಟರ್‌ನ ಸ್ನಾತಕ, ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಡಿ.21ರಿಂದ ವಿಶೇಷ ಪರೀಕ್ಷೆ ನಡೆಸಲಾಗುವುದು. ಮಂಗಳೂರಿನ ವಿವಿ ಕಾಲೇಜು, ಉಡುಪಿಯ ಎಂಜಿಎಂ ಕಾಲೇಜು, ಮಡಿಕೇರಿಯ ಎ್ಎಂಕೆಎಂಸಿ ಕಾಲೇಜಿನಲ್ಲಿ ಪರೀಕ್ಷೆ ನಡೆಸಲಾಗುವುದು. ಶ್ರೀಲಂಕಾದ ವಿದ್ಯಾರ್ಥಿಗಳ ಸಹಿತ ಒಟ್ಟು 5 ಸಾವಿರ ಮಂದಿ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ. ಆಯಾ ಕಾಲೇಜಿನ ಪ್ರಾಂಶುಪಾಲರ ಮೂಲಕ ಪತ್ರ ನೀಡಿ ಪರೀಕ್ಷೆಗೆ ಹಾಜರಾಗಬಹುದು. ಹಳೆಯ ನೋಂದಣಿ ಮೂಲಕವೇ ಪರೀಕ್ಷೆ ಬರೆಯಬಹುದು. ಇದಕ್ಕಾಗಿ ಪ್ರತ್ಯೇಕ ಶುಲ್ಕ ಪಾವತಿಸಬೇಕಿಲ್ಲ.
- ಡಾ. ಪಿ.ಎಲ್.ಧರ್ಮ, ಪರೀಕ್ಷಾಂಗ ಕುಲಸಚಿವ, ಮಂಗಳೂರು ವಿಶ್ವವಿದ್ಯಾನಿಲಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News