ಗ್ರಾಪಂ ಸೋಲಾರ್ ದೀಪದ ಬ್ಯಾಟರಿ ಕಳವು

Update: 2020-11-24 16:27 GMT

ಶಿರ್ವ, ನ.24: ಮುದರಂಗಡಿ ಗ್ರಾಪಂ ವ್ಯಾಪ್ತಿಯ ಪಿಲಾರು ಗ್ರಾಮದ ವಿವಿಧ ಕಡೆಗಳಲ್ಲಿ ರಸ್ತೆಯ ಬದಿಯಲ್ಲಿ ಪಂಚಾಯತ್‌ನಿಂದ ಅಳವಡಿಸಲಾದ ಸೋಲಾರ್ ದೀಪದ ಬ್ಯಾಟರಿಗಳು ಕಳವಾಗಿರುವ ಬಗ್ಗೆ ವರದಿಯಾಗಿದೆ.

ಪಿಲಾರು ಗ್ರಾಮದ ಕುಂಜಿಗುಡ್ಡೆ ರಸ್ತೆ, ಮಿತ್ತಬೆಟ್ಟು ರಸ್ತೆ ಜಂಕ್ಷನ್, ಕುಂಜಿಗುಡ್ಡೆ, ಪಿಲಾರು ಸೇತುವೆಯ ಬಳಿ, ಕೊಡಮಣಿತ್ತಾಯ ದೈವಸ್ಥಾನದ ಬಳಿ, ಪರಾಡಿ ಬಬ್ಬುಸ್ವಾಮಿ ದೈವಸ್ಥಾನದ ಬಳಿ ತಲಾ ಒಂದು, ಪಿಲಾರು ಪರಾಡಿ ಬಬ್ಬು ದೈವಸ್ಥಾನದ ಬಳಿ ಎರಡು ಮತ್ತು ಪಿಲಾರು ಜಾರಾಂದಾಯ ದೈವಸ್ಥಾನದ ರಸ್ತೆಯ ಬಳಿ ನಾಲ್ಕು ಸೇರಿದಂತೆ ಒಟ್ಟು 12 ಸೋಲಾರ್ ದೀಪದ ಬ್ಯಾಟರಿಗಳನ್ನು ಕಳ್ಳರು, ಕಳವು ಮಾಡಿರುವುದು ನ.5ರಂದು ಬೆಳಕಿಗೆ ಬಂದಿದೆ. ಇವುಗಳ ಮೌಲ್ಯ 60,000ರೂ. ಅಂದಾಜಿಸಲಾಗಿದೆ. ಪಿಡಿಓ ಸುರೇಶ್ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News