ಯಕ್ಷಗಾನ ಕಲಾವಿದರ ಮಾಹಿತಿಗೆ ಆಹ್ವಾನ
ಉಡುಪಿ, ನ.25: ಕರ್ನಾಟಕ ಯಕ್ಷಗಾನ ಅಕಾಡೆಮಿ ‘ಯಕ್ಷೋಪಾಸಕರು’ ಶೀರ್ಷಿಕೆಯಡಿಯಲ್ಲಿ ಯಕ್ಷಗಾನ ಕಲಾವಿದರ ಪರಿಚಯವನ್ನು ನೀಡುವ ಎರಡು ಸಂಪುಟಗಳನ್ನು ಈಗಾಗಲೇ ಹೊರತಂದಿದ್ದು, ಸೇರ್ಪಡೆಯಾಗದೇ ಇರುವ ಕಲಾವಿದರನ್ನು ಒಳಗೊಳ್ಳುವಂತೆ ಮುಂದಿನ ಸಂಪುಟವನ್ನು ತರುವ ಯೋಜನೆ ಯನ್ನು ಹಾಕಿಕೊಂಡಿದೆ.
ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡ ವೃತ್ತಿಪರ ಕಲಾವಿದರು ಮತ್ತು ಹವ್ಯಾಸಿ ಕಲಾವಿದರ ಕುರಿತ ವ್ಯಕ್ತಿಚಿತ್ರ ಈ ಸಂಪುಟದಲ್ಲಿ ಇರುತ್ತದೆ. ಕಳೆದ ಐದು ವರ್ಷಗಳಿಂದ ಯಕ್ಷಗಾನದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಎಲ್ಲ ಯಕ್ಷಗಾನದ ಕಲೋಪಾಸಕರೂ ಕೂಡಾ (ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ) ತಮ್ಮ ವಿವರಗಳನ್ನು ಅಕಾಡೆಮಿಗೆ ಸಲ್ಲಿಸಬಹುದು.
ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡ ವೃತ್ತಿಪರ ಕಲಾವಿದರು ಮತ್ತು ಹವ್ಯಾಸಿ ಕಲಾವಿದರ ಕುರಿತ ವ್ಯಕ್ತಿಚಿತ್ರ ಈ ಸಂಪುಟದಲ್ಲಿ ಇರುತ್ತದೆ. ಕಳೆದ ಐದು ವರ್ಷಗಳಿಂದ ಯಕ್ಷಗಾನದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಎಲ್ಲ ಯಕ್ಷಗಾನದ ಕಲೋಪಾಸಕರೂ ಕೂಡಾ (ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ) ತಮ್ಮ ವಿವರಗಳನ್ನು ಅಕಾಡೆಮಿಗೆ ಸಲ್ಲಿಸಬಹುದು. ವಿವರಗಳನ್ನು ನೀಡುವಾಗ ಹೆಸರು, ಹುಟ್ಟಿದ ದಿನಾಂಕ, ತಂದೆತಾಯಿಯ ಹೆಸರು, ಗುರುಗಳು ಮತ್ತು ಕಲಿತ ಕೇಂದ್ರ, ಪ್ರಧಾನವಾಗಿ ಕಾಣಿಸಿಕೊಂಡ ಪಾತ್ರಗಳು, ತಿರುಗಾಟ ಮಾಡಿದ ಮೇಳಗಳು, ಹವ್ಯಾಸಿಗಳಾಗಿದ್ದಲ್ಲಿ ಸಂಸ್ಥೆ/ ತಂಡದ ಹೆಸರು, ಪ್ರದರ್ಶನಗಳನ್ನು ನೀಡಿದ ವಿವರ, ದೊರೆತ ಗೌರವ ಪುರಸ್ಕಾರಗಳು, ವಿವಾಹಿತರಾಗಿದ್ದಲ್ಲಿ ಸಂಗಾತಿ ಮತ್ತು ಮಕ್ಕಳ ಹೆಸರು, ಪೋಟೋ ಹಾಗೂ ಲೇಖನ ರೂಪದಲ್ಲಿ ಕಿರುಪರಿಚಯ ಇದ್ದಲ್ಲಿ ಅದನ್ನು ಲಗತ್ತಿಸಿ, ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಡಿಸೆಂಬರ್ 15ರೊಳಗೆ ಕಳುಹಿಸುವಂತೆ ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.