ವಾಹನ ಅಪಘಾತದಲ್ಲಿ ಇಬ್ಬರು ಮೃತ್ಯು ಪ್ರಕರಣ: ಚಾಲಕನ ವಿರುದ್ಧ ಪ್ರಕರಣ ದಾಖಲು

Update: 2020-11-30 13:31 GMT

ಪುತ್ತೂರು: ಉಪ್ಪಿನಂಗಡಿ ಸಮೀಪದ ಕಲ್ಲೇರಿ ಎಂಬಲ್ಲಿ ಬೈಕೊಂದಕ್ಕೆ ಪಿಕಪ್ ಜೀಪ್ ಢಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪಿಕಪ್ ಜೀಪು ಚಾಲಕನ ವಿರುದ್ಧ ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪಿಕಪ್ ಜೀಪು ಚಾಲಕ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ನಿವಾಸಿ ಹರೀಶ್ ಎಂಬಾತ ಜೀಪು ಚಲಾಯಿಸಿದ್ದು, ಕಲ್ಲೇರಿಯ ಹುಣಸೆಕಟ್ಟೆ ಎಂಬಲ್ಲಿ ಜಯರಾಮ ಮತ್ತು ಕೃಷ್ಣ ಪ್ರಸಾದ್ ಎಂಬ ಯುವಕರು ಹೋಗುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಇವರಿಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅಪಘಾತ ನಡೆಸಿದ ಜೀಪು ಚಾಲಕ ಹರೀಶ್ ಸ್ಥಳದಿಂದ ತನ್ನ ವಾಹನ ಸಹಿತ ಪರಾರಿಯಾಗಿದ್ದರು. ಬಳಿಕ ಆತನ ವಾಹನವನ್ನು ಕಲ್ಲೇರಿ ಜನತಾ ಕಾಲೊನಿ ಬಳಿ ಸಾರ್ವಜನಿಕರು ತಡೆದಿದ್ದರು.

ಬಳಿಕ ಆತನನ್ನು ಬಂಧಿಸಿರುವ ಪೊಲೀಸರು ಕೃತ್ಯ ಎಸಗಿರುವ ಬಗ್ಗೆ ಆತನ ವಿರುದ್ಧ ಪುತ್ತೂರು ಸಂಚಾರಿ ಪೊಲೀಸರು ಕಲಂ 279, 134ಎ,ಬಿ, 145ಐಎಂವಿ ಮತ್ತು 304ಐಪಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News