ವಸಂತ ಭಟ್ ತೊಡಿಕಾನ ನಿಧನ
Update: 2020-12-04 08:56 GMT
ಸುಳ್ಯ: ಸಾಮಾಜಿಕ ಮುಂದಾಳು ವಸಂತ ಭಟ್ ತೊಡಿಕಾನ(70) ಇಂದು ಮುಂಜಾನೆ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ 3 ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಶುಕ್ರವಾರ ಬೆಳಗ್ಗೆ ನಿಧನರಾದರು.
ಅಡಿಕೆ ಹಳದಿ ರೋಗದ ಸಂದರ್ಭ ಬೆಳೆಗಾರರಿಗೆ ತಾಳೆ ಬೆಳೆಯ ಮೂಲಕ ಧೈರ್ಯ ತುಂಬಲು ಸತತ ಪ್ರಯತ್ನ ಮಾಡಿ ಯಶಸ್ವಿಯಾಗಿ ಈಚೆಗೆ ತಾಳೆ ಬೆಳೆಗಾರರ ಸಂಘ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ತೊಡಿಕಾನ ದೇವಸ್ಥಾನ, ತಲಕಾವೇರಿ ದೇವಸ್ಥಾನ ಸೇರಿದಂತೆ ವಿವಿಧ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.