ಸ್ವಯಂಸೇವಕರ ದಿನಾಚರಣೆಯ ಅಂಗವಾಗಿ ಬೀಚ್ ಸ್ವಚ್ಛತೆ

Update: 2020-12-06 10:33 GMT

ಕೊಣಾಜೆ, ಡಿ.6: ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಘಟಕ ಜಂಟಿಯಾಗಿ ಅಂತಾರಾಷ್ಟ್ರೀಯ ಸ್ವಯಂಸೇವಕರ ದಿನದ ಅಂಗವಾಗಿ, ಸಮುದ್ರ ತೀರದ ಸ್ವಚ್ಚತಾ ಕಾರ್ಯಕ್ರಮವನ್ನು ಮಂಗಳೂರಿನ ತಣ್ಣೀರುಬಾವಿಯಲ್ಲಿ ಹಮ್ಮಿಕೊಂಡಿತ್ತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಘಟಕದ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಯುವ ಸ್ವಯಂಸೇವಕರಿಗೆ ಪ್ರೋತ್ಸಾಹಿಸಿ, ಸ್ವಯಂ ಸೇವೆಯ ಮೌಲ್ಯವನ್ನು  ಅಳವಡಿಸಲು ಕರೆ ನೀಡಿದರು.

ಯುವ ರೆಡ್ ಕ್ರಾಸ್  ದಕ್ಷಿಣ ಕನ್ನಡದ ಅಧ್ಯಕ್ಷ ಸಚೇತ್ ಸುವರ್ಣ, ವ್ಯವಸ್ಥಾಪಕ ಸಮಿತಿಯ ಸದಸ್ಯ ರವೀಂದ್ರ, ಯುವ ರೆಡ್ ಕ್ರಾಸ್ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್  ಕಮ್ಯುನಿಕೇಷನ್ ನ ಕಾರ್ಯಕ್ರಮ ಅಧಿಕಾರಿ ಡಾ.ತಪಸ್ವಿ, ತರಬೇತುದಾರ ಅಶ್ವಿನ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ನಿಟ್ಟೆ ವಿವಿ ಯುವ ರೆಡ್ ಕ್ರಾಸ್  ಸಂಘಟಕಿ ಲತಾ ಎಸ್. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಹಾಗೂ ಯುವ ರೆಡ್ ಕ್ರಾಸ್ ಘಟಕ ನಿಟ್ಟೆ ಉಷಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ನ ಕಾರ್ಯಕ್ರಮ ಅಧಿಕಾರಿ ಸುಕೇಶ್ ವಂದಿಸಿದರು. ಕ್ಯಾರೋಲಿನ್ ಸಿಕ್ವೇರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News