ಮಂಗಳೂರು-ಬೆಂಗಳೂರು ಸ್ಪೇಷಲ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭ

Update: 2020-12-06 13:57 GMT

ಮಂಗಳೂರು, ಡಿ.6: ಮಂಗಳೂರು ಮತ್ತು ಬೆಂಗಳೂರು ನಗರಗಳ ನಡುವೆ ಸ್ಪೇಷಲ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಸಾಮಾನ್ಯ ದರ ದೊಂದಿಗೆ ಆರಂಭಿಸಲು ಭಾರತೀಯ ನೈರುತ್ಯ ರೈಲ್ವೆ ಮುಂದಾಗಿದೆ.

ಬೆಂಗಳೂರಿನಿಂದ ಹೊರಡುವ ಕೆಎಸ್‌ಆರ್ ಬೆಂಗಳೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಟ್ರೇನ್ (06515) ಮಂಗಳೂರಿಗೆ ಪ್ರಯಾಣಿಸಲಿದೆ. ಇದೇ ರೈಲು (06516) ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸಲಿದೆ. ಪ್ರತೀ ರೈಲು ವಾರದಲ್ಲಿ ನಾಲ್ಕು ದಿನಗಳ ಕಾಲ ಪ್ರಯಾಣಿಕರಿಗೆ ಸೇವೆ ನೀಡಲಿವೆ.

ಬೆಂಗಳೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (06515) ರೈಲು ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಪ್ರತೀ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಪ್ರಯಾಣ ಬೆಳೆಸಲಿದೆ. ಈ ರೈಲು ಸೇವೆಯು ಡಿ.8ರಿಂದ 24ರವರೆಗೆ ಸಾರ್ವಜನಿಕ ಸೇವೆಗೆ ಮುಕ್ತವಾಗಿ ಸಿಗಲಿದೆ.

ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಹೊರಡುವ ಸ್ಪೇಷಲ್ ಎಕ್ಸ್‌ಪ್ರೆಸ್ ರೈಲು ರಾತ್ರಿ 10:30ಕ್ಕೆ ಪ್ರಯಾಣ ಆರಂಭಿಸಲಿದ್ದು, ಯಶವಂತಪುರ (10:40), ಕುಣಿಗಲ್ (11:39), ಬಿ.ಜಿ. ನಗರ (12:04), ಶ್ರವಣ ಬೆಳಗೋಳ (12:29), ಚೆನ್ನರಾಯಪಟ್ಟಣ (12:39), ಹಾಸನ (1:40), ಸಕಲೇಶಪುರ (2:40), ಸುಬ್ರಹ್ಮಣ್ಯ (5:35), ಕಬಕ ಪುತ್ತೂರು (6:23), ಬಂಟ್ವಾಳ (6:53), ಮಂಗಳೂರು ಜಂಕ್ಷನ್ (7:30), ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಬೆಳಗ್ಗೆ 8:35ಕ್ಕೆ ತಲುಪಲಿದೆ.

ಮಂಗಳೂರು ಸೆಂಟ್ರಲ್‌ನಿಂದ ಬೆಂಗಳೂರಿಗೆ ಹೊರಡುವ ರೈಲು (06516) ಕೂಡ ನಾಲ್ಕು ದಿನಗಳ ಕಾಲ ಸೇವೆ ನೀಡಲಿದೆ. ಮಂಗಳವಾರ, ಬುಧವಾರ, ಶುಕ್ರವಾರ, ರವಿವಾರ ಈ ರೈಲು ಓಡಾಡಲಿದೆ. ಡಿ.9ರಿಂದ 25ರವರೆಗೆ ಈ ವಿಶೇಷ ರೈಲಿನ ಸೇವೆ ಲಭ್ಯವಾಗಲಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಹೊರಡುವ ರೈಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ರಾತ್ರಿ 7 ಗಂಟೆಗೆ ಪ್ರಯಾಣ ಆರಂಭಿಸಲಿದೆ. ಅಲ್ಲಿಂದ ಮಂಗಳೂರು ಜಂಕ್ಷನ್ (8:23), ಬಂಟ್ವಾಳ (8:54), ಕಬಕ ಪುತ್ತೂರು (9:19), ಸುಬ್ರಹ್ಮಣ್ಯ (10:10) ಸಕಲೇಶಪುರ (1:45), ಹಾಸನ (2:55), ಚೆನ್ನರಾಯಪಟ್ಟಣ (3:44), ಬಿ.ಜಿ.ನಗರ (4:29), ಕುಣಿಗಲ್ (4:59), ಯಶವಂತಪುರ (6:28), ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣವನ್ನು ಬೆಳಗ್ಗೆ 7 ಗಂಟೆಗೆ ತಲುಪಲಿದೆ.

ಸ್ಪೇಷಲ್ ಎಕ್ಸ್‌ಪ್ರೆಸ್ ರೈಲು ಸೇವೆ ನೀಡುವ ರೈಲುಗಳು ಒಂದು ಎಸಿ 2-ಟೈರ್ ಕೋಚ್, ಒಂದು ಎಸಿ 3-ಟೈರ್ ಕೋಚ್, ಏಳು ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚೆಸ್, ನಾಲ್ಕು ಜನರಲ್ ಸೆಕೆಂಡ್ ಕ್ಲಾಸ್ ಕೋಚೆಸ್ ಮತ್ತು ಎರಡು ಸೆಕೆಂಡ್ ಕ್ಲಾಸ್ ಕೋಚೆಸ್, ಜೊತೆಗೆ ಲಗೇಜ್ ಬೋಗಿಯನ್ನು ಒಳಗೊಂಡಿರಲಿವೆ ಎಂದು ಭಾರತೀಯ ನೈರುತ್ಯ ರೈಲ್ವೆಯ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News